Followers

About Me/ನನ್ನ ಬಗ್ಗೆ

Wednesday, July 31, 2013

ಟಿ ಇಫೆಕ್ಟ್

ದೇಶದಲ್ಲೀಗ ಟಿ ಇಫೆಕ್ಟ್
ಆಗಿದೆ ಇದು ಕ್ರಿಟಿಕಲ್ ಆಸ್ಪೆಕ್ಟ್
ಮಾಡುವುದೇ ಸರ್ಕಾರ ರಿಜೆಕ್ಟ್
ಖಂಡಿತ ಆಗುವುದಿದು ಎಲೆಕ್ಷನ್ ಸಬ್ಜೆಕ್ಟ್

ಕಿಚ್ಚ - ಹುಚ್ಚ

ಲವ್ವರ್ ಸಿಕ್ಕರೆ
ಕಿಚ್ಚ
ಲವ್ವರ್ ಕೈಕೊಟ್ರೆ
ಹುಚ್ಚ

ನ್ಯೂಸ್ ಪೇಪರ್

ಪ್ರತಿದಿನ ಸಿಗುವೆ ನೀ
ನ್ಯೂಸ್ ಪೇಪರ್ ನಂತೆ
ಆದರೆ
ಹೊಸತನವಿಲ್ಲದ ನಿನ್ನ ಸ್ಟೈಲ್
ಹಳೇ ದೂರದರ್ಶನದ
ನ್ಯೂಸ್ ರೀಡರ್ ನಂತೆ

ಬಾಳು ಬಂಗಾರ

ಲವ್ವಲ್ಲಿ ಬಿದ್ದಾಗ
ಬಾಳು ಬಂಗಾರ
ಲವ್ವರ್ ಕೈಕೊಟ್ರೆ
ಡೆಡ್ ಬಾಡಿಗೆ ಸಿಂಗಾರ

ಲವ್ ಸ್ಟೋರಿ

ನಂದು ಒಂದು ಲವ್ ಸ್ಟೋರಿ
ನನ್ನ ಬಾಳಲ್ಲೂ ಬಂದಿದ್ದಳು ಪೋರಿ
ಅಂದುಕೊಂಡಿದ್ದೆ ಅವಳು ಚಂದ್ರ ಚಕೋರಿ
ಕೊನೆಗೆ ಹಾಕಿಬಿಟ್ಟಳು ನನ್ನ ಹೃದಯಕ್ಕೆ ಚೂರಿ

ಬೆಳದಿಂಗಳ ಬಾಲೆ

ಹುಡುಗಿ ಚೆನ್ನಾಗಿದ್ದರೆ
ಬೆಳದಿಂಗಳ ಬಾಲೆ
ಇಲ್ಲದಿದ್ದರೆ ಉರಿಯುವುದು
ಬೆಂಕಿ ಜ್ವಾಲೆ

"ಆಸರೆ"

ನನ್ನ ಬಾಳಲಿ ಬಂದ ಅಪ್ಸರೆ
ನೋಡನೋಡುತ್ತಲೇ ಆದೆ ಮರೆ
ನಿನಗಾದೆ ನಾ ಸೆರೆ
ಬಂದುಬಿಡು ನನ್ನ ಬಾಳಿಗೆ ನೀ "ಆಸರೆ"

ಒಲವು

ನಿನ್ನ ಮೇಲೆ ಆಗಿದೆ ಒಲವು
ಅದಕ್ಕೆ ಕಾರಣ ಹಲವು
ಹೇಳುವೆ ನಾ ಕೆಲವು
ನಿನ್ನಿಂದಲೇ ನನ್ನ ಬಾಳಿಗೆ ಬಲವು

ಟಿವಿನೈನು

ಗಂಡ ಹೆಂಡತಿ ಚೆನ್ನಾಗಿದ್ದರೆ
ವೆರಿ ಫೈನು
ಇಲ್ಲದಿದ್ದರೆ ಅವರ ಸ್ಟೋರಿಗೆ ಬರುತ್ತೆ
ಟಿವಿನೈನು

ಫ್ಲ್ಯಾಟು

ಅವಳ ನಗುವಿಗೆ
ಅವನು ಫ್ಲ್ಯಾಟು
ಅವಳಿಗಾಗಿ
ಮಾರಿದ
ಫ್ಲ್ಯಾಟು

ಅಚ್ಚರಿ

ಪಡ್ಡೆ ಹುಡುಗ
ಅಡ್ಡ ಸಿಕ್ಕರೆ
ಅಚ್ಚರಿ
ಒಂಟಿ ಬ್ಯೂಟಿ
ಸಿಕ್ಕರೆ
"ಅಚ್ಚಾರಿ"

ಬ್ಯೂಟಿ

ಅವಳ ಹೆಸರು ಸ್ವೀಟಿ
ಅವಳು ಕಾಲೇಜು ಬ್ಯೂಟಿ
ಅವಳದ್ದು ಕೆಂಪು ಸ್ಕೂಟಿ
ಅವಳ ನೋಡುವುದೇ ಹುಡುಗರ ಡ್ಯೂಟಿ

ಹೊಳಪು

ಕಲ್ಲು ಹೃದಯವೆಂದು
ಕುಟ್ಟಿ ಕುಟ್ಟಿ ಪುಡಿಮಾಡಬೇಡ
ಕಣ್ಣೀರಿನಿಂದ ತೋಯ್ದು ತೋಯ್ದು
ನುಣುಪಾಗಿಸು
ತಿಳಿಯುವುದಾಗ
ಅದಲ್ಲ ಕಪ್ಪು ಬಿಳುಪು
ಕಾಣುವುದು ಅದರೊಳಗಿನ ಹೊಳಪು

ಎಚ್ಚರ

ಅಂದು ಅವಳು ಅಂದುಕೊಂಡಿದ್ದು
ಅವನು ಅವಳ ನಲ್ಲ
ಮುತ್ತೊಂದು ಪಡೆದಿತ್ತು ಗಲ್ಲ
ಹತ್ತಿರ ಬಂದು ಬಿಟ್ಟ ಮೆಲ್ಲ
ಮುಗಿದ ಮೇಲೆ ಎಲ್ಲ
ಹೇಳುತ್ತಿದ್ದಾನೆ
ನಾನವನಲ್ಲ ನಾನವನಲ್ಲ
ನಾನವ"ನಲ್ಲ"

ಮನಸು

ಮನಸು
ಅವಳ
ಮನಸು
ಅರಿಯುವದರಲ್ಲೇ
ಮುಗಿಯಿತು
ಅವನ
ಆಯಸ್ಸು

"ಸರಿಸಾಟಿ"

ನೋಡಿ ಅವಳ ಬ್ಯೂಟಿ
ಹಾಕಿದ ಅವ ಸೀಟಿ
ನಂತರ ನೋಡಿದರೆ
ಅವಳು ಘಾಟಿ
ಇವನು ಪಕ್ಕಾ ನಾಟಿ
ಒಬ್ಬರಿಗೊಬ್ಬರು "ಸರಿಸಾಟಿ"

ತೆಲಂಗಾಣ

ಬಹಳ ಸುದ್ದಿಯಲ್ಲಿದೆ ತೆಲಂಗಾಣ
ಅದರಿಂದ ಆಂಧ್ರ ರಣಾಂಗಣ
ಅದರಲ್ಲೂ ಕಂಡಿದ್ದು ಹಲವು ಬಣ
ಈಗ ಕಾದು ನೋಡಬೇಕು ಚುನಾವಣಾ ಕಣ

ಇನ್ ಕಾರ್

ನನ್ನ ಪ್ರೀತಿಗೆ ಅವಳಿಂದ
ಇನ್ ಕಾರ್
ಎಕೆಂದರೆ ನನ್ನ ಬಳಿ ಇಲ್ಲ
ಕಾರ್

ಟಿ ಇಫೆಕ್ಟ್

ದೇಶದಲ್ಲೀಗ ಟಿ ಇಫೆಕ್ಟ್
ಆಗಿದೆ ಇದು ಕ್ರಿಟಿಕಲ್ ಆಸ್ಪೆಕ್ಟ್
ಮಾಡುವುದೇ ಸರ್ಕಾರ ರಿಜೆಕ್ಟ್
ಖಂಡಿತ ಆಗುವುದಿದು ಎಲೆಕ್ಷನ್ ಸಬ್ಜೆಕ್ಟ್

Sunday, July 28, 2013


"ಫೋರ್ ಟ್ವೆಂಟಿ"



ಚಿತ್ರ ವಿಚಿತ್ರ ಸಿನಿಮಾ ಹೆಸರು
ಎ ದಿಂದ ಶುರುವಾಗಿ ಝಡ್ ಗೆ ಕೊನೆಯಾದವು
ಅಂದು ಸತ್ಯವಾನ್ ಸಾವಿತ್ರಿ
ನಂತರ ಒನ್ ಟು ತ್ರೀ
ಮಧ್ಯದಲ್ಲಿ ಬಂದವು ಆಂಟಿ, ಬಂಟಿ
ಮುಂದೆ ಇರಬಹುದು
ಕೇವಲ "ಫೋರ್ ಟ್ವೆಂಟಿ"

ಸ್ವಾಮಿ



ಬಿಳಿಯ ವಸ್ತ್ರ ತೊಟ್ಟು
ಹಣೆಯಲಿ ಬೊಟ್ಟು ಇಟ್ಟು
ಉದ್ದದ ಕೇಶ ಬಿಟ್ಟು
ಅಡ್ಡಾಡಿ ಬಿಟ್ಟರೆ ಆಗುತ್ತಾರೆ ಇವರು ಸ್ವಾಮಿ
ಇವರನು ನೋಡಿದ ಜನ ಅನ್ನಬಹುದು ದೇಶದಲಿ
ಬಿಳಿ ಬಟ್ಟೆಗೇನು ಕಮ್ಮಿ

ಲವರು



ಜೊತೆಗಿದ್ದರೆ ಲವರು
ಇರತ್ತೆ ಪವರು
ಇಲ್ಲದಿದ್ದರೆ ಅನಿಸುತ್ತದೆ ಬಾಳು
ನೆಟ್ವರ್ಕ್ ಇಲ್ಲದ ಟವರು

ಟಿ-ಟ್ವೆಂಟಿ



ಮೊದಲು ಇದ್ದದ್ದು ಫಿಫ್ಟಿ ಫಿಪ್ಟಿ
ನಂತರ ಬಂತು ಟಿ-ಟ್ವೆಂಟಿ
ತುಂಬಾ ಖುಷಿಪಟ್ಟಿತ್ತು ಕಂಟ್ರಿ
ಆದರೆ
ಫಿಕ್ಸಿಂಗ್ ನಿಂದ ಆಗಿದೆ ಈಗ ಎಲ್ಲಾ "ಫೋರ್ ಟ್ವೆಂಟಿ"