Followers

About Me/ನನ್ನ ಬಗ್ಗೆ

Friday, August 23, 2013

ಪ್ರೀತಿ ಕಟ್ಟೆ

ನನ್ನಾಕಿ ನನ್ನಾಕಿ
ಅಂದ್
ಹೇಳಿ ಹೇಳಿ ನಿನ್ನ
ನನ್ನವಳು ಅಂದ್ಕೊಂಡಿದ್ನಲ್ಲೆ
ಈಗ ನನ್ನೂಕಿ
ಹೋಗ್ಬಿಟ್ಟೆ
ಒಡೆದು ಹಾಕ್ದೆ ನನ್ನ
ಪ್ರೀತಿ ಕಟ್ಟೆ

ಕಾಲೇಜ್ ಹವಾ

ಹುಡುಗ ಕೀಟಲೆ ಮಾಡಿದರೆ
ಹಿಂದೆ ಬೇಕಾಗಿತ್ತು "ಖಾಕಿ"
ಇಂದು
ಒಂದೇ ಅಸ್ತ್ರ "ರಾಖಿ"

ನೋಟ



ಕಾಲೆಜಿನ ಸಹಪಾಠಿ ಸುಮನ
ಅವಳ ಮೇಲಿತ್ತು ನನ್ನ ಗಮನ
ಅವಳನ್ನ ದಿನಾ ನೋಡುತ್ತಿದ್ದೆ ನಾ
ಕೊನೆಗೆ ಆಕಿ ಹೇಳ್ ಬಿಟ್ಳು
ಸಮಾ ಇಲ್ಲಾ ನಾ

ನೀರು-ಬೀರು



ಅವನು ಅವಳ ಮರೆಯಲು
ಹರಿಸಿದ ಕಣ್ ತುಂಬ ನೀರು
ಆಗದು ಎಂದು ತಿಳಿದಾಗ
ಕುಡಿದ ಕಂಠ ಪೂರ್ತಿ ಬೀರು

ಪ್ರೇಮ್ ಕಹಾನಿ



ಕೇರಳದ ಕುಟ್ಟಿಗೆ ಕೇಳಿದ್ರೆ ಹೇಳಿದ್ಲು "ವೇಂಡಾ"
ತೆಲುಗು ಹುಡುಗಿ ರಿಪ್ಲೈ "ಪೋಂಡಾ"
ನಮ್ಮ ಬೆಂಗ್ಳೂರ ಹುಡುಗಿ
................ನಮ್ಮಣ್ಣ ಗೂಂಡಾ

ರಿಕವರಿ



ಅವನ ಬಾಳಿನಲ್ಲಿ ತುಂಬಾ
ವರಿ
ಕಾರಣ
ಅವನ ಕೆಲಸ ಲೋನ್
ರಿಕ-ವರಿ

ಬದಲಾವಣೆ



ಓ ಹೆಣ್ಣೇ
ನಿನ್ನ ಸಿಂಧೂರ
ಹೋಯ್ತು ದೂರ
ಮೂಗುತಿ ಭಾರ
ಕತ್ತಲ್ಲಿಲ್ಲ ಹಾರ

ಕಾಣದು ಕಿವಿಯೋಲೆ
ಗೆಜ್ಜೆಯಿಲ್ಲದ ಕಾಲೇ
ಕಾಣದು ಮಲ್ಲಿಗೆ ಮಾಲೆ

ಕೈಗಿಲ್ಲ ಬಳೆ
ಮುಖದಲ್ಲಿಲ್ಲ ಕಳೆ
.........ಮರೆಯದಿರು
ನೀ ಭಾರತೀಯ ಮಹಿಳೆ

Friday, August 16, 2013

ಗೆಳೆಯ-ಅಳಿಯ

ಗೆಳೆಯ-ಅಳಿಯ
ಅಂದು
ಹೇಳಿದಳು
ಅಪ್ಪಾ ಇವನು ನನ್ನ
ಗೆಳೆಯ
ಇಂದು ಬಂದು
ಹೇಳಿದಳು
ಇವನೇ ನಿನ್ನ ಅಳಿಯ

ಒಂಥರಾ

ಅಂದು ನೀ ಹೇಳಿದ್ದು ನಾನೂ ಸಹ ನಿಂಥರಾ
ನಮ್ಮಿಬ್ಬರ ಪ್ರೀತಿ ನಿರಂತರ
ಇಂದೇಕೆ ಆಡುತಿರುವೆ ಒಂಥರಾ
ಶುರುವಾಗಿದೆ ನಮ್ಮಿಬ್ಬರ ನಡುವೆ ಅಂತರ
"ಸಿಹಿ" ಹೋಗಿ ಬರಿ ಉಳಿದಿದೆ "ಖಾ........ರ"

ಆಧುನೀಕತೆ

ಹಿಂದೆ ಮನೆಯಿಂದ
ಹೊರಡುವ ಮುನ್ನ
ಹಿರಿಯರಿಗೆ ನಮನ
ಇಂದು
ಹೋಗುತ್ತಾರೆ
ಹಿರಿಯರು ನಮ್ಮನ್ನು
ಕೇಳುವ ಮುನ್ನ

ಸ್ವಾತಂತ್ರ್ಯೋತ್ಸವ

ಕೊಟ್ಟ ಸ್ವಾತಂತ್ರ್ಯವನು
"ತಂತ್ರ" "ಪ್ರತಿತಂತ್ರ"ಗಳಲಿ
ಅನುಭವಿಸುತ
ಸಿಹಿ ಹಂಚಿ ತಿನ್ನುತಿಹೆವು
ಅದಕೆ
ಸ್ವಾತಂತ್ರ್ಯದ ದಿನ
ಎಂದರೆ ರಜ
ಹಲವರಿಗೆ ಕೇವಲ ಮಜ

ತಿಂದ ಗುಂಡುಗಳೆಷ್ಟೋ
ಸುರಿದ ರಕ್ತವೆಷ್ಟೋ
ಕಷ್ಟಪಟ್ಟು ಕೊಟ್ಟ ಸ್ವಾತಂತ್ರ್ಯವನು
ಇಷ್ಟಬಂದಂತೆ ಅನುಭವಿಸುತಿಹೆವು

ಹೋದ ಹೋದಲ್ಲಿ
ಆಗುತಿದೆ ಅಭಿವೃದ್ಧಿಯ ಘೋಷಣೆ
ಕಾಲಚಕ್ರದಲ್ಲಿ ಉಳಿದಿದೆ ಕೇವಲ ಆಶ್ವಾಸನೆ

ಇದೆಲ್ಲದರ ನಡುವೆ ಇದೆ ಸಾಧಿಸುವ ಛಲ
ಆ ನಿರ್ಧಾರ ಅಚಲ
ಸಿಗಲಿ ಎಲ್ಲರ ಬೆಂಬಲ
ಆಗುವೆವು ನಾವಾಗ ಸಫಲ

ಇದೇ ನನ್ನ ಆಶಯ
ತಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯ

ಇಂಟಿಗ್ರೇಶನ್

ಅವರು
ಭಾಷಣದಲ್ಲಿ ಹೆಳಿದ್ದು
ದೇಶದ ಇಂಟಿಗ್ರೇಶನ್
ಜನ ಕೇಳಿದ್ದು
ಇಂಟಿಗೆ ರೇಶನ್ನು
(ಇಂಟಿಗೆ ಅಂದ್ರೆ ತೆಲುಗುದಲ್ಲಿ ಮನೆ)

ವ್ಯಥೆ


ನಮ್ಮ ಸೈನಿಕರು
ಮಾಡುತ್ತಿದ್ದರೂ ಬಲಿದಾನ
ನಮ್ಮನ್ನಾಳುವವರು
ಇನ್ನೂ ಮಾಡುತ್ತಿದ್ದಾರೆ
ಸಂಧಾನ

Sunday, August 11, 2013

ಮತದಾರ


ಎಣ್ಣೆಯ ಅಮಲಿನಲಿ ಓಟು ಕೊಟ್ಟು
ತನ್ನತನವು ಮರೆತು
ಕೊಟ್ಟ ನೋಟಿಗಾಗಿ
ಹಾಕಬೇಡ ನೀ ಜೈಕಾರ
ಗೊತ್ತೋ ಗೊತ್ತಿಲ್ಲದೇ ಹಾಕಿದರೆ ನೀ ಹಾರ
ಹೊತ್ತುಕೊಳ್ಳುವೆ ಅವರ ಪಾಪದ ಭಾರ
ನೆನಪಿರಲಿ ಗೆಳೆಯ
ನೀ ಈ ದೇಶದ ಪ್ರಜ್ಞಾವಂತ ಮತದಾರ

ಸುದಿನ

ದೀನನಾಗಿ ಹೇಳುತ್ತಿರುವೆ ಗೆಳತಿ
ಆದೆ ನಾ ನಿನಗೆ ಅಧೀನ
ಎಂದು ಆಗುವೆಯೋ ನೀ ನನ್ನ ಸ್ವಾಧೀನ
ಅದೇ ನನ್ನ ಬಾಳಿನ ಸುದಿನ

ಪ್ರೇಮಪತ್ರ

ಅಂದು ಕೊಟ್ಟ ಪ್ರೇಮಪತ್ರ
ನೋಡ ನೋಡುತ ಬಂದ ಹತ್ರ
ಮುದುವೆಗೆ ಒಪ್ಪಿದರು ಮಾತಾ ಪಿತೃ
ಇಂದು ನಮಗೆ ಇದ್ದಾನೆ ಒಬ್ಬ ಒಳ್ಳೆ ಪುತ್ರ

ಹೊಳೆ

ಹೊಳೆ ನೋಡಿ ಪ್ರಿಯತಮ
ಖುಷಿ ಪಟ್ಟು
ಮೇಲಿಂದ ಹಾರಿದ
ಮತ್ತೆ ಮೇಲೆ ಬರಲಿಲ್ಲ
ಆಗ ನೋಡಿದಳು ಪ್ರಿಯತಮೆ
ಹೊಳೆ ಆಳ ಇದೆ
ನೀರಿನಲ್ಲಿ ಧುಮುಕಬೇಡಿ
ಎಂಬ ಫಲಕ ಅವಳನ್ನು ಅಣುಕಿಸುತ್ತಿತ್ತು

ವನಮಹೋತ್ಸವ

ವನಮಹೋತ್ಸವಕ್ಕೆಂದು
ಬಂದ ಅತಿಥಿ
ಗಿಡ ನೆಡಲು ಹೋದಾಗ
ಕಂಡದ್ದು
ಗುಣಿ ಹಳತು
ಗಿಡ ಮಾತ್ರ ಹೊಸತು
ಹಳೆ ಗಿಡ ಸತ್ತು
ಹೊಸ ಗಿಡ ನೆಡಲು ಬಂದ
ಅತಿಥಿ
ಬಂದತ್ತಿತ್ತು ಮಾಡಲು
ಹಳೆ ಗಿಡದ ತಿಥಿ

ನಲ್ಲೆ

ಓ ನನ್ನ ನಲ್ಲೆ
ನಿನ ಮ್ಯಾಲೆ ಮನಸಾಯ್ತಲ್ಲೆ
ನೀನ್ಯಾಕ ನನಗೊಲ್ಲೆ
ನಿನ ಮನಸು ಕಲ್ಲೇ

ಚಂದಾ

ಅವಳು ಬಹಳ ಅಂದಾ
ನೋಡಕ್ ಭಾಳ್ ಚಂದಾ
ಮಾತಾಡಕ್ಕಂತ ಹೋದ್ರೆ
ಕೇಳಿದ್ಲು
ಕೊಡ್ತೀರಾ ನೆರೆ ಪರಿಹಾರಕ್ಕೆ ಚಂದಾ

ಬರದು


ಮಾಡಿದೆವು ನಾವು ಮರಳಿಗಾಗಿ
ಕೆರೆ, ನದಿಯನು ಬರಿದು
ಅದಕೆ ಅಲ್ಲಿ ನೀರು ಬರದು

ನಿ-ವೇದನೆ

ಅವರು ಮಾಡುತಿರುವವರು
ಸಹಾಯಕ್ಕೆ ನಿವೇದನೆ
ಯಾರು ಮಾಡರು ಅರ್ಥವಾಗದು ಅವರಿಗೆ
ಅವರ ಮೂಕ ವೇದನೆ

ಮಳೆ

ಅಂದು ಮದುವೆಯ ಮೊದಲು ಹೇಳಿದ
ನಿನ್ನ ಮೇಲೆ
ಪ್ರೀತಿಯ ಮಳೆ ಸುರಿವೆ
ಇಂದು ಪ್ರೀತಿ ಮಾಯವಾಗಿದೆ
ಛಾವಣಿ ಹಾಳಾಗಿದೆ
"ಮಳೆ" ಮಾತ್ರ ಸುರಿಯುತಿದೆ

ಮದುವೆ

ಮದುವೆಯ ಮೊದಲು ಪ್ರೀತಿಯ ಜೀವನ
ಇರುವುದು ಹಾಲು ಜೇನಿನ ಹಾಗೆ
ಮದುವೆಯ ನಂತರ ಪ್ರೀತಿಯಿರದಿದ್ದರೆ
ಇರುವುದು ಹೆಜ್ಜೇನು ಕಚ್ಚಿದ ಹಾಗೆ

ಪ್ರಜಾ ಪ್ರತಿನಿಧಿ

ಪ್ರಜಾ ಪ್ರತಿನಿಧಿ
ಅವರು ಪ್ರಜಾ ಪ್ರತಿ ನಿಧಿ
ಬಯಸುವರು ಪ್ರತಿ ಕೆಲಸಕೂ
ಪ್ರಜೆಗಳ ನಿಧಿ

ಕಿಚ್ಚ-ಹುಚ್ಚ


ಲವ್ವರ್ ಸಿಕ್ಕರೆ
ಕಿಚ್ಚ
ಲವ್ವರ್ ಕೈಕೊಟ್ರೆ
ಹುಚ್ಚ

ಇರುವೆ


ಪ್ರೀತಿಯ ಅಮಲಿನಲಿ ಹೇಳಿದ್ದಳು
ನೀ ನನ್ನ ಜೊತೆ ಇದ್ದರೆ
ನಾನು ಸಂತೋಷವಾಗಿ ಇರುವೆ
ಇಂದು ಪ್ರೀತಿ ಇಲ್ಲದೆ
ಹೇಳುತ್ತಿದ್ದಾಳೆ ಕಚ್ಚಿದ ಹಾಗಿದೆ ಇರುವೆ

ಹೊತ್ತಿಗೆ


ಅಮ್ಮ ತಂದು ಕೊಟ್ಟಳು
ಚೆನ್ನಾಗಿ ಓದಿಕೊಳ್ಳಲು ಹೊತ್ತಿಗೆ
ಮಗ ಮಲಗಿ ನಿದ್ರೆ ಹೋಗಿದ್ದ
ಅವಳು ಹಿಂತಿರುಗಿ
ಬರುವ ಹೊತ್ತಿಗೆ

ಬದುಕು


ಇರಲು ಹಳೆಯ ಮನೆ
ಜೋರಾಗಿ ಬಂದಿಹುದು ಮಳೆ
ಸೋರುತಿಹುದು ಒಂದೇ ಸಮನೆ

ಹರಿದ ಅಂಗಿ
ಒಂದೇ ಒಂದು ಲುಂಗಿ
ಮದುವೆಯ ವಯಸಿನ ತಂಗಿ

ಇಲ್ಲ ಅಪ್ಪನ ಆಸ್ತಿ
ಸಾಲಗಾರರ ದೋಸ್ತಿ
ಕುಟುಂಬದ ಸದಸ್ಯರು ಜಾಸ್ತಿ

ಕಲಿತಿಲ್ಲ ಸಾಲಿ (ಶಾಲೆ)
ಮಾಡುವುದು ಕೂಲಿ
ಕಷ್ಟ ಮಾಮೂಲಿ

ಸಂಸಾರ ತುಸು ಭಾರ
ಸಮಸ್ಯೆ ಅಪಾರ
ಪ್ರತಿದಿನ ಬರಿ ಖಾರ

ಎಲ್ಲ ಭಗವಂತನ ಆಟ
ಜೀವನವೇ ಒಂದು ಪಾಠ
ಕೊನೆಯಾಗುವುದು ಒಮ್ಮೆ ಈ ಓಟ

ಡ್ಯುಯೆಟ್ಟು - ಡಯೆಟ್ಟು

೩೦ ರವರೆಗೆ ಡ್ಯುಯೆಟ್ಟು
ತಿನ್ನಬಹುದು ಉಪ್ಪಿಟ್ಟು, ಒಬ್ಬಟ್ಟು
ನಂತರ
ಓನ್ಲಿ ಡಯೆಟ್ಟು
೫೦ ಕ್ಕೆ ಬದಲಾಯಿಸು
ಹಲ್ ಸೆಟ್ಟು

ಬಡತನ

ಬಡತನಕ್ಕೆ
ಹೊಸ
"ವ್ಯಾಖ್ಯೆ"
ಬೇಕಾಗಿದೆ
ಮಾಡಿದ
"ಉದ್ಧಾರ"
ಸಾಕಾಗಿದೆ
ಯೋಚಿಸಿ
ದೇಶ "ಎತ್ತ" ಸಾಗಿದೆ

Sunday, August 4, 2013

ವೇಲು

ಬೈಕ್ ಲ್ಲಿ ಸರಿಯಿರಲಿ
ವೇಲು
ಜೋರಾಗಿ ತಿರುಗುತ್ತಿರುತ್ತದೆ
ವ್ಹೀಲು
ವ್ಹೀಲಿಗೆ ವೇಲು ಸಿಕ್ಕಿಕೊಂಡರೆ
ಲೈಫ್ ನಿಂದಾನೇ ಆಗುವಿರಿ
ಫೇಲು

ಗೆಳೆಯ

ಮಾತನಾಡದೇ ಮೌನವನಿರಿಯುವ ಗೆಳೆಯ
ತೆಗೆದುಬಿಟ್ಟೆ ನನ್ನ ಮನದ ಕೊಳೆಯ
ಎರೆದೆ ಬಾಳಿನಲಿ ಸುಖದ ಮಳೆಯ
ನನ್ನ ಮುಖದಲಿ ತಂದೆ ಹೊಸ ಕಳೆಯ
ಓ ಗೆಳೆಯ
ಸ್ನೇಹಿತರ ದಿನ ಕ್ಷಣಿಕ
ನಮ್ಮಿಬ್ಬರ ಗೆಳೆತನ ಶಾಶ್ವತ

ಕಥೆ-ವ್ಯಥೆ

ಹಳಸಿದ ಅನ್ನ
ಹರಿದ ಬಟ್ಟೆ
ಎಲ್ಲರಿಗೂ ಒಂದೇ ತಟ್ಟೆ

ಇಲ್ಲ ಒಪ್ಪತ್ತಿನ ಊಟ
ಮಕ್ಕಳಿಗಿಲ್ಲ ಆಟ
ಮಲಗಲು ಇಲಿ ಹೆಗ್ಗಣಗಳ ಕಾಟ

ಸೋರುವ ಸೂರು
ನೀರಿಲ್ಲದ ಬೋರು
ತಾಪತ್ರೆ ನೂರು

ಇಲ್ಲ ನೆರವು
ಜಾಣ ಮರೆವು
ಕಾರಣ ಹಲವು

ಕಾಣಲು ಕನಸು
ಇಲ್ಲ ಮನಸು
ಎಲ್ಲರ ಮೇಲೆ ಮುನಿಸು

ಇದಲ್ಲ ಕಥೆ
ನಮ್ಮವರ ವ್ಯಥೆ

ರಾಜಕೀಯ

ಇಂದಿನ ರಾಜಕೀಯ
ತುಂಬಾ ನಾಟಕೀಯ
ಅವರ ಹೇಳಿಕೆ ಅಸಹನೀಯ
ಗೆಲ್ಲಿಸಿದ ಮತದಾರರನ್ನೇ ಮಾಡಿಬಿಟ್ಟರು
ಪರಕೀಯ

ಕಾಲ

ಅತ್ತೆಗೊಂದು ಕಾಲ
ಸೊಸೆಗೊಂದು ಕಾಲ
ಕೌಟುಂಬಿಕ ಹಿಂಸೆಯಿಂದ
ಸೊಸೆಗೆ
"ಯಮ" "ಗಂಡ" ಕಾಲ

ತಪಸ್ಸು

ಅಂದು ಅಮೃತಕ್ಕಾಗಿ ಮಾಡಿದರು
ಕಠೋರ ತಪಸ್ಸು
ಇಂದು "ಅಮೃತಾ"ಳಿಗಾಗಿ ಸುತ್ತುವರು
ಕಾಲೇಜು ಕ್ಯಾಂಪಸ್ಸು

ವರ್ಗ

ನಮ್ಮಲ್ಲಿವೆ ಹಲವು ವರ್ಗ
ಎಲ್ಲರೂ ಬಯಸುವುದು ಸ್ವರ್ಗ
ಒಬ್ಬರದು "ದೇವಮಾರ್ಗ"
ಕೆಲವರಿಗೆ ಇವೆ "ದರ್ಗಾ"
ಉಳಿದವರಿಗೆ ಆದಿಶಕ್ತಿ "ದುರ್ಗಾ"

ಮಾಜಿ

ಮದುವೆ ಬಗ್ಗೆ ಕೇಳಿದೆ ಕ್ಯಾಜಿ
ಆಗಲಿಲ್ಲ ಅವಳು ರಾಜಿ
ಅದಕೆ ಅವಳು ಮಾಜಿ
ಹೊಸಬಳಿಗೆ ಹೇಳುವೆ ಆಜಿ

ಸುಮನ

ಅವಳ ಹೆಸರು ಸುಮನ
ಅವಳ ಮೇಲೆ ನನ್ನ ಗಮನ
ನೋಡುತ್ತಿದ್ದೆ ಒಂದೇ ಸಮನ
ಆಕಿ ಹೇಳ ಬಿಟ್ಳು ಸಮಾ ಇಲ್ಲಾ ನಾ

ವೆಲ್ ಕಮ್ಮು

ಹುಡುಗಿ ಬಂದಾಗ ವೆಲ್ ಕಮ್ಮು
ಹುಡುಗಿ ಹೋದ ಮೇಲೆ
ಎಳೆಯುವರು ದಮ್ಮು
ಕುಡಿಯುವರು ರಮ್ಮು
ಅಗಲೂಬಹುದು ದೇವದಾಸ ಖಾಯಮ್ಮು

ಮದ್ದು

ಅಂದು ಅನಿಸಿದ್ದು
ರೆಡ್ಡಿ ಯಡ್ಡಿ ಅಭಿವೃದ್ಧಿಗೆ ಅಡ್ಡಿ
ಇಂದು ಅನಿಸುತಿದೆ
ಸಿದ್ದು ಇದ್ದೂ ಏಕಿಲ್ಲ
ಅಭಿವೃದ್ಧಿಯ ಮದ್ದು

ವೆಲ್ ಕಮ್ಮು

ಹುಡುಗಿ ಬಂದಾಗ ವೆಲ್ ಕಮ್ಮು
ಹುಡುಗಿ ಹೋದ ಮೇಲೆ
ಎಳೆಯುವರು ದಮ್ಮು
ಕುಡಿಯುವರು ರಮ್ಮು
ಅಗಲೂಬಹುದು ದೇವದಾಸ ಖಾಯಮ್ಮು

ಸುಮನ

ಅವಳ ಹೆಸರು ಸುಮನ
ಅವಳ ಮೇಲೆ ನನ್ನ ಗಮನ
ನೋಡುತ್ತಿದ್ದೆ ಒಂದೇ ಸಮನ
ಆಕಿ ಹೇಳ ಬಿಟ್ಳು ಸಮಾ ಇಲ್ಲಾ ನಾ

ಹೊಸಾ ಪಾಲಿಸಿ

ಹುಡುಗಿ ಹುಡುಗನ ಬಗ್ಗೆ ಮಾಡಿದರೆ ಕಮೆಂಟು
ನಕ್ಕು ಬಿಡಿ
ಅದೇ ಹುಡುಗ ಹುಡುಗಿ ಬಗ್ಗೆ ಮಾತನಾಡಿದರೆ
ನಾಲ್ಕು ಇಕ್ಕಿ ಬಿಡಿ

Friday, August 2, 2013

ಹೋರಾಟ

ಅಣ್ಣಾ ಮಾಡಿದ್ದು ಹೋರಾಟ
ಬ್ರಷ್ಟಾಚಾರದ ವಿರುದ್ಧ ಕಾದಾಟ
ಪ್ರಾರಂಭದಲ್ಲಿ ಒಗ್ಗಟ್ಟಿನ ಕೂಗಾಟ
ಇಂದು ಹೋರಾಟವೇ ಆಯಿತು ಅನಾಥ

ಟ್ರಾಫಿಕ್ ಪೋಲೀಸ್

ಸಿಕ್ಕಿದರೆ ಪೋಲೀಸು
ಹಾಕುತ್ತಾನೆ ಕೇಸು
ಕೈಗೆ ನೋಟಿತ್ತರೆ
ಕೆಲಸ ಆಗುವುದು ಸಲೀಸು

ಕಣ್ಣೀರು

ಮಳೆಯಿಂದ ಕಳೆದುಕೊಂಡರು ಸೂರು
ಆಸೆ ಆಕಾಂಕ್ಷೆಗಳು ನುಚ್ಚುನೂರು
ಜಲಾವೃತವಾಗಿದೆ ಊರು
ಉಳಿದಿದೆ ಕೇವಲ ಕಣ್ಣೀರು

ಕಲಾಪ

ನಡೆಯುತ್ತಿದೆ ಕಲಾಪ
ನೋಡ ಸಿಗುತ್ತಿದೆ ಅಲ್ಲಿ ಕೇವಲ ಆರೋಪ-ಪ್ರತ್ಯಾರೋಪ
ಒಬ್ಬರ ಮೇಲೆ ಇನ್ನೊಬ್ಬರ ಕೋಪ
ತಗಲದೇ ಇವರಿಗೆ ಬಡವರ ಶಾಪ?

ನಿಜಾನಾ?

ಮೊದಲ ವರ್ಷ ರೀ
ಎರಡನೇ ವರ್ಷ ಏನ್ರೀ!?
ಮೂರನೇ ವರ್ಷ ಏನಂದ್ರೀ????
ಮುಂದೆ ..........
ಗೊತ್ತು ಸುಮ್ಮಂಗ ಕುಂದ್ರಿ!!!!!!

ನೇರ ದಿಟ್ಟ ನಿರಂತರ

ಟ್ವೆಂಟಿ ಫೋರು ಇಂಟು ಸೆವೆನ್ನು ನಿಮ್ಮ ನ್ಯೂಸು
ಕ್ವಾಲಿಟಿಗಿಲ್ಲ ಅಲ್ಲಿ ಎಕ್ಸ್ ಕ್ಯೂಸು
ನಿಮ್ಮ ನ್ಯೂಸೇ ಒಂಥರಾ
ಏಕೆಂದರೆ ಅದು
ನೇರ ದಿಟ್ಟ ನಿರಂತರ

ಎಲ್ ಐ ಸಿ ಏಜೆಂಟು

ಅವನು ತುಂಬ ಇಂಟೆಲಿಜೆಂಟು
ಕೂಡಿಸಿಟ್ಟಿದ್ದಾನೆ ದೊಡ್ಡ ಗಂಟು
ಕಟ್ಟಿಸಿದ್ದಾನೆ ಮನೆ ಎಂಟು
ಏಕೆಂದರೆ ಅವನು ಎಲ್ ಐ ಸಿ ಏಜೆಂಟು

ದಂಪತಿ

ಸಾಕು ಪ್ರಿಯೆ
ನಿನಗಾಗಿ ನಾ ಬರೆದ
ದ್ವಿಪದಿ, ತ್ರಿಪದಿ,
ಇನ್ನು ಬರೆಯಲಾರೆ
ಚೌಪತಿ
ಇಡೋಣ ಕೂಡಿ
ಸಪ್ತಪದಿ
ಆಗೋಣ ಇಬ್ಬರೂ
ದಂಪತಿ

"ಸಾರಿ"

ನಗುವೆಯಾ ಒಂದು ಸಾರಿ
ಅಂದಿದಕ್ಕೆ
ಅವಳು ಕೇಳಿದ್ದು
ಕೊಡಿಸುವೆಯಾ
ಒಂದು "ಸಾರಿ"

ಬದಲಾವಣೆ


ಅಂದು ಹೆಳುತ್ತಿದ್ದರು
ಗುರುವೇ ನಮಃ
ಇಂದು ಹೇಳುತ್ತಿದ್ದಾರೆ
ಗುರುವೇನ್ ಮಹಾ

ಅಂದಿನದು
ರಣಧೀರರ ಹಿಂಡು
ಇಂದು
ರಣಹೇಡಿಗಳ ದಂಡು

ಇಲ್ಲ ಗುರುವಿನ ಮೇಲೆ
ಭಕ್ತಿ
ಸಿಗದು ಬಾಳಿಗೆ
ಮುಕ್ತಿ

ಅಂದು ಗುರುಗಳಿಗೆ
ಗುರುದಕ್ಷಿಣೆ
ಇಂದು ಬೇಕಾಗಿದೆ
ಗುರುವಿಗೇ ರಕ್ಷಣೆ

ಬೇಕು ಗುರು ಬಾಳಿಗೆ
ಆಗಲೇ ಅಲ್ಲಿ ಏಳಿಗೆ

"ಕಾಲಾಯ ತಸ್ಮೈ ನಮಃ"

ಅಕ್ಕ ಅಣ್ಣನ
ನೆನಪು ಕಾಡತೈತಿ ನನಗೆ

ಅತ್ತು ಆಡಿದ
ಆ ದಿನಗಳು
ಮತ್ತೆ ಬಾರವೆಂದು
ದುಃಖವಾಗುತಿದೆ ನನಗೆ

ಅಂದು ಆಡಿದ ಜಗಳ
ತಿಂದ ಪೆಟ್ಟು
ಬರುತಿದೆ ಕಣ್ಮುಂದೆ

ಅಂತ ದಿನಗಳು
ಬರಲಾರವು ಮುಂದೆ

ಅಂದು ಇದ್ದರು
ಅತ್ತರೆ ಅಮ್ಮ

ಅಕ್ಕಅಣ್ಣನಿಗೆ
ನಾ ಪ್ರೀತಿಯ ತಮ್ಮ

ಬದಲಾದ ದಿನದಲ್ಲಿ
ಎಲ್ಲ ಅದಲು ಬದಲು

ಹೋಗಿ ಸೇರಲು
ಇಲ್ಲ ಸಮಯ

ಎಲ್ಲ ಕಾಲು, ಮೆಸೇಜ್ ಮಯ

ಕಾಲಚಕ್ರ ತಿರುಗುತಿರಲು
ಹೇಳುವುದೊಳಿತು
"ಕಾಲಾಯ ತಸ್ಮೈ ನಮಃ"