Followers

About Me/ನನ್ನ ಬಗ್ಗೆ

Tuesday, October 29, 2013

ಸುದ್ದಿ-ಬುದ್ಧಿ

ಕುಡಿಯುವ ನೀರಿಗಾಗಿ
ನಗರ ಸಭೆ ಮುತ್ತಿಗೆ
ದೊಡ್ಡ ಸುದ್ದಿ
ಪೈಪ್ ಒಡೆದು ಪೋಲಾಗುತಿದೆ ನೀರು
ದೊಡ್ಡ ಸುದ್ದಿ
ಮತ್ತೇನು ಇಲ್ಲಾ
ಇಷ್ಟೆಲ್ಲಾ ಆದ್ರೂ ನಮ್ಮವರಿಗೆ ಬರಲ್ಲಾ
ಬುದ್ಧಿ

ಲೆಕ್ಕಾಚಾರ

ಸಾಫ್ಟವೇರ್ ಎಂಜಿನೀಯರ್
ಸಾಫ್ಟಿಲ್ಲ
ಹಾರ್ಡವೇರ್ ಅಂಗಡಿ ಮಾಲೀಕ
ಹಾರ್ಡಲ್ಲ
ಮದುವೆಯ ಮುನ್ನ ಮಾಡುವ
ಲೆಕ್ಕಾಚಾರಗಳಿಗೆ
ನಮ್ಮ ಸಮಾಜದಲ್ಲಿ ಮಿತಿಯಿಲ್ಲ

ಪ್ರಕೃತಿ

ಸರ್ಕಾರಿ ಆಸ್ತಿಗಳ
ಅತಿಕ್ರಮಣ
ಪ್ರಕೃತಿಯ ಮೇಲಿನ
ಆಕ್ರಮಣ
ಜೀವಸಂಕುಲಗಳ ನಡುವಿನ
ಘರ್ಷಣ
ಪ್ರಕೃತಿಯೇ ಆಗಿದೆ ರಣಾಂಗಣ

Saturday, October 26, 2013

ಯುವಸಿಂಹಗಳು


ಕನ್ನಡ ರಾಜ್ಯೋತ್ಸವ


ಸ್ಥಿತಿಗತಿ



ಹಸಿರು

ಹಸಿರು ಹಸಿರೆಂದು
ಕಾಡು ಬೆಳೆಸಿರೆಂದರೆ
ನಾವು ಬೆಳೆಸಿದ್ದು ಕಾಂಕ್ರೀಟ್ ಕಾಡು
ನೀರಿಗಾಗಿ ಕೆರೆ ಉಳಿಸಿರೆಂದರೆ
ನಾವು ಯೋಚಿಸಿದ್ದು
ಟ್ಯಾಂಕರ್ ನೀರು

ಆಶಾಭಾವ

ನಮ್ಮ ಸರ್ಕಾರ
ರಾಜ್ಯದ ಪ್ರಗತಿಗೆ ಬದ್ಧ
ಎಲ್ಲದ್ದಕ್ಕೂ ಸಿದ್ಧ
ಬೇಡ ಶಂಕೆ
ನಮ್ಮ ಮುಖ್ಯ ಮಂತ್ರಿಗಳ
ಹೆಸರಿನಲ್ಲಿಯೇ ಇದೆ "ಸಿದ್ಧ"

ಹೀಗೂ ಉಂಟೇ

ವೇದಿಕೆಗೆ ಅವರು ಕೊಡಲು ಹೋಗಿದ್ದು
ಹೂವು
ಆದರೆ ಅವರ ಕಾಲಬುಡಕ್ಕೆ ಬಂದಿತ್ತು
ಹಾವು

ಹಿಂಗೂ ಇರ್ತಾರೆ

ಇಲ್ಲದಿದ್ದರೆ ರೆಂಟು
ಬೇಕು ದಿನಪೂರ್ತಿ ಕರೆಂಟು
ಇದ್ದರೆ
ಬಳಸುವರು ಬಲ್ಬು ಫ್ಲೋರೋಸೆಂಟು

ಹೆತ್ತವರು

ಹಾದಿ ತಪ್ಪಿದ ಮಗಳ/ನ
ಸರಿ ದಾರಿಗೆ ತರಲು
ಅವಳು ಕಟ್ ಮಾಡಿದ್ದು ಪಾಕೆಟ್ ಮನಿ
ಅವಳೋ/ನೋ ಬಲುಚತರೆ/ರ
ಬಿಟ್ಟೇ ಬಿಟ್ಳು ಅವನ/ಅವಳ ಫ್ರೆಂಡ್ ಜೊತೆ
ಮನಿ(ಮನೆ)

ಹೂದೋಟ

ಬಾಳೆಂಬ ಹೂದೋಟದಲ್ಲಿ
ಬದುಕೆಂಬ ಮಲ್ಲಿಗೆಯು
ಘಮಘಮಿಸುತಿರಲು
ಬಾಳಿಗೇ ಶೃಂಗಾರ
ಹೂದೋಟದ
(ಗುಲಾಬಿ) ಗಿಡದಲ್ಲಿ
ಹೂವಿಗಿಂತ ಮುಳ್ಳೇ ಇರಲು
ಬದುಕನಿಸುವುದು ಭಾರ

Monday, October 21, 2013

ಒಡಲು-ಕಡಲು

ಇದ್ದ ಮರಗಳನ್ನೆಲ್ಲ ಕಡಿದು
ಬೆಟ್ಟ ಗುಡ್ಡಗಳನು ಒಡೆದು
ಬರಿದಾಗಿಸಿದೆ ನೀ
ಭೂತಾಯಿಯ ಒಡಲು
ತೈಲ ಸಾಗಾಣಿಕೆ
ಬಾಂಬ್ ಸ್ಫೋಟಗಳಿಂದ
ಕಲುಷಿತವಾಗಿದೆ ಕಡಲು

ದೊರೆ

ದೂರವಾಗದಿರು ದೊರೆಯೇ
ದಾರಿ ಕಾಯುತಿಹೆನಿಲ್ಲಿ...
ಅರಿಯಲಾಗದ ತಳಮಳ
ಶುರುವಾಗಿದೆ ನನ್ನಲ್ಲಿ
ನೀನ್ಯಾರೋ ನಾನರಿಯೆ
ಸನಿಹಕೆ ಬಾ
ಒಲವ ಚೆಲುವಲ್ಲಿ
ಗೆಲುವು ಕಾಣುವ
ಬಯಕೆ ನೆರವೇರಲಿ

ಮರೆ

ಮಳೆಗಾಲ
ಮರೆಯಾಗಿ
ಮಳೆಹನಿಯು
ಮೋಡಸೇರಿ
ಮಳೆಬಿಲ್ಲು
ಮೈದಳೆದಿತ್ತು
ಕತ್ತಲೆಯ
ಕಾರ್ಮೋಡ
ಕಾಣದಂತೆ
ಕಾಣದಂತೆ
ಕಳೆದಿತ್ತು

ನನಗನಿಸಿದ್ದು

ಅವಳು ಕಳಿಸಿದ
ಸಂದೇಶಗಳನು
ಓದುತ
ನನಗನಿಸಿದ್ದು
ಒಳ್ಳೆಯದು
ಆಗುತ್ತಿಲ್ಲ
ಪದೇಪದೇ
ಆಗುತ್ತಿಲ್ಲ
ಉದ್ದದ ರಿಂಗ್ ಟೋನ್ ಸದ್ದು

ನಮ್ಮ ಜೀವನ ಬಹಳ ವಿಚಿತ್ರ ಕಣ್ರೀ


ಗುಲಾಬಿ


ಕನ್ನಡಿ


Saturday, October 19, 2013

ಕಾಟ


ಸಮಿತಿ


ನಮ್ಮೂರ ಕೆರೆ


ಮಳೆಗಾಲದ ದಿನ


ಮುಂಜಾನೆ


ಇರುಳು-ಉರುಳು

ದಟ್ಟ ಕಾನನದಲ್ಲಿ
ಹೋಗುವಾಗ
ಭಾಸವಾಗುತ್ತಿತ್ತು
ಹಗಲೆಲ್ಲ ಇರುಳು
ಗಿಡಮರಗಳು ಮಾಯ
ಅಡವಿಗಾಗಿದೆ ಗಾಯ
ನೆನೆಸಿಕೊಂಡರೆ ಭಯ
ಅನಿಸುತಿದೆ
ನಮ್ಮ ಬಾಳಿಗೇ
ಬಂದಿದೆ ಇರುಳು
ಬಿಗಿದಂತಾಗಿದೆ ಉರುಳು

ನಿಜ

ಜನವನರಿಯಲು
ತಿಳಿಯದಾದರೆ ಹೂಂ ಅನ್ನಬಹುದು
ಜಗವನರಿಯಲಾರದೆ?
ಸುಡು ಬಿಸಿಲು
ಭಯಂಕರ ಬರ
ಮುನಿಸಿರುವನು ಶಂಕರ!
ಉಕ್ಕಿ ಬಂದಿರುವ ಪ್ರವಾಹ
ಕೊಚ್ಚಿ ಹೋಗುತಿರುವ ಜನ
ಬೆಚ್ಚಿ ಬೀಳಿದರೆ
ಇಲ್ಲ ಪ್ರಯೋಜನ!
ಎಚ್ಚೆತ್ತು ಮಾಡು ನೀ ಕೆಲಸವ
ಬಿಟ್ಟು ಬಿಡು ಅತಿಯಾಸೆಯ
ಕಡಿದ ಕಾಡನು
ಹಿಡಿದು ಬೆಳೆಸಿ
ಹಚ್ಚ ಹಸಿರನು ಮತ್ತೆ ತಾ,
ಮೆಚ್ಚುವನು ಶಿವ
ಹುಚ್ಚು ಆಟವ ಬಿಟ್ಟುಬಿಡು
ಓ ಮನುಜ
ಅರಿತುಕೊ ಇದು ನಿಜ!!

ಕಾರಣ

ಮತ್ತೆ ಶುರುವಾಯಿತು
ಮಿತ್ರ ಪಕ್ಷ
ಏಕೆಂದರೆ
ಮುಗಿದಿದೆ
ಪಿತೃ ಪಕ್ಷ

ಅಡಿ-ಗಲ್ಲು

ಪ್ರತಿದಿನ ಹಾಕುವರು
ಹೊಸ ಯೋಜನೆಗಳಿಗೆ
ಅಡಿಗಲ್ಲು
ಅದರ ಉದ್ಘಾಟನೆ ಆಗದು
ಏಕೆಂದರೆ
ನಂತರ ಹಾಕುತ್ತಲೇ
ಇರುವರು ಅ ಕೆಲಸಕ್ಕೆ
ಕಲ್ಲು

ಸಾಲು

ಅವನು ಓದುತ್ತಿದ್ದ
ಅವನು ಬರೆದ ಕವಿತೆಗಳ ಸಾಲು
ಕೇಳಿ ಕೇಳಿ ಸುಸ್ತಾಗಿ
ಅವಳು ಹೇಳಿದಳು
ದಮ್ಮಯ್ಯಾ "ಇನ್ನು ಸಾಲು"

ಉಚಿತ

ಒಂದು ಕೊಂಡರೆ ಒಂದು ಉಚಿತ
ವ್ಯಾಪರಿಗಳಿಗೆ ಲಾಭ ನಿಶ್ಚಿತ
ಕೊಂಡವರ ಜೇಬಿಗೆ ಕತ್ತರಿ
.....................ಖಚಿತ

ಹೆಡ್ ಲೈನ್

ಗಣಿ ಅಕ್ರಮ ಸಿಬಿಐಗೆ
ಎಲ್ಲರಿಗೂ ಗೊತ್ತಿರುವ
ವಿಚಾರ
ಅದರ ರಿಮೋಟ್ ಕಂಟ್ರೋಲ್
ಕೇಂದ್ರದ ಕೈಗೆ

ಕಾಲಾಯ ತಸ್ಮೈ ನಮಃ

ಅಂದು ಹೇಳಿದ್ದು
ಬಿಜೇಪಿ ಸೇರುವುದಕ್ಕಿಂತ
ರಾಜಕೀಯ ಸನ್ಯಾಸವೇ ಲೇಸು
ಇಂದು
ಎನ್.ಡಿ.ಎ. ಸೇರ್ಪಡೆಗೆ ಕಾಯುತ್ತಿದ್ದಾರೆ
ಕಾರಣ
ಸಣ್ಣ ಆಸೆ
ಸಿಗಬಹುದು ಕೇಂದ್ರ ಸಕಾರದಲ್ಲಿ
ಒಂದು ಮಜಬೂತಾದ ಪ್ಲೇಸು

ಒಲವು

ಹಲವು ದಿನಗಳಿಂದ
ಆರೋಪ ಪ್ರತ್ಯಾರೋಪಗಳಲ್ಲಿ
ಇದ್ದವರು
ಹೊಂದಾಣಿಕೆ
ಮಾಡಿಕೊಳ್ಳುತ್ತಿದ್ದಾರೆ
ಕಾರಣ ಇರಬಹುದು "ಹಲವು"
ಒಳಗಿರುವ ಕಾರಣ
ಅಧಿಕಾರಕ್ಕಾಗಿ "ಒಲವು"

ಕಾಲುಬಾಯಿ ರೋಗ

ರಾಜ್ಯದಲ್ಲಿ ಹರಡುತಿದೆ
ಜಾನುವಾರುಗಳಿಗೆ ಕಾಲುಬಾಯಿ ರೋಗ
ಆದರೆ ನಮಗೆ
ಬಾಯಿ ರೋಗ
"ಸುದ್ದಿ" ಬಗ್ಗೆ ಮಾತಾಡೋದೇ
ಆಗಿದೆ ಒಂದು ಉದ್ಯೋಗ
(ಕ್ರಿಟಿಕಲ್ ಥಿಂಕಿಂಗ್ ಎಂಬ ಹೆಸರು ಬೇರೆ)

ಕೃತಿ-ವಿಕೃತಿ

ಬರುತ್ತಿರುವೆ ಹಲವು ಹೊಸ ಕೃತಿ
ಮನುಷ್ಯನ ಭಾವನೆಗಳಿಗೆ ಹಿಡಿದ ವಿಕೃತಿ
ನಂತರ ಆರೋಪ-ಪ್ರತ್ಯಾರೋಪ
ಹಲವರ ಭಾವನೆಗಳಿಗೆ ಧಕ್ಕೆಯಾಗಿ
ದಿನವೂ ಪಡೆಯುವವರು ಶಾಪ

ವಿಚಾರವಾದಿ

ಅವರು ಪ್ರಧಾನಿಯಾಗಲು
ಯೋಗ್ಯರಲ್ಲ
ಇವರು
ಹೇಳಿಕೆ ನೀಡಲು
ಯೋಗ್ಯರೇ
ದಿನಬೆಳಗಾದರೆ
ತಿನ್ನುವರು
ಪುಳಿಯೊಗರೆ
ದಿನವಿಡಿ ಹೇಳಿಕೆ ನೀಡಿ
ಮಾಡುತ್ತಿರುವರು
ರಗಳೆ

Saturday, October 12, 2013

ಪ್ರೀತಿಯ ಪರೀಕ್ಷೆ

ಇಂದು ಇರಬಹುದು ಸಿಟ್ಟು
ಮುಂದೆ ಕೊಡಬಹುದು
ಒಲವಿನೊಬ್ಬಟ್ಟು
ಪ್ರೀತಿಯ ಪರೀಕ್ಷೆಗಾಗಿ
ಇಟ್ಟಿರಬಹುದು
ಅವೆಲ್ಲವನ್ನೂ ಬಚ್ಚಿಟ್ಟು
ಎಲ್ಲದ್ದಕ್ಕೂ ಇದೆ ಉತ್ತರ
ಇದ್ದರೆ ಒಳ್ಳೆಯದು
ತಾ.........................ಳ್ಮೆ

"ಇಲ್ಲ"

ನಮ್ಮಿಬ್ಬರ
ಪ್ರೀತಿಯಲ್ಲಿ
ಬೇಕಿಲ್ಲ
ಈ ಒಂದು ಪದ
"ಇಲ್ಲ"

ನನ್ನವಳು

ಕನಸಲ್ಲಿ
ಅವಳು ಬಂದಾಗ
ಅನಿಸಿದ್ದು
ಅವಳು ನನ್ನವಳು
ಅದು ನನಸಲ್ಲಿ ಬಂದಾಗ
ಏನು ಅನಿಸಲಿಲ್ಲ
ಅದು ನನ್ನವಳ ನೆರಳು

ಪರಿಹಾರ

ಬಂದಿದೆ ಮಳೆಯಿಂದ
ಪ್ರವಾಹ
ಆಗಿದೆ ಜನಜೀವನದ ಮೇಲೆ
ಪ್ರಹಾರ
ಕರೆಯಿದೆ ನೀಡಬೇಕೆಂದು
ಪರಿಹಾರ
ಗಂಭೀರ ಸಮಾಲೋಚನೆ ನಡೆಸುತ್ತಿದೆ
ಸರ್ಕಾರ

ಕನಸಿನ ಕರ್ನಾಟಕ

ನುಡಿ ಕನ್ನಡ
ನಡೆ ಕನ್ನಡ
ಎಲ್ಲೆಡೆ ಕನ್ನಡವಿರಲು
ಕನಕನ ಕನಸಿನ ಕರ್ನಾಟಕ
ಕಂಗೊಳಿಸುವುದು
ನಿಶ್ಚಿತ

ಬೆವರು

ಗಣಿಗಾರಿಕೆಯ
ನೆಲದಲ್ಲಿ
ಲೋಕಾಯುಕ್ತದ
ಎಣಿಕೆಯಲ್ಲಿ
ಕಂಬಿಯ ಹಿಂದೆ
ಸಾಗುತಿದೆ
"ನಾಯಕ"ರ ದಂಡು
ಸಮಾಜವೇ ಬೆವರುತ್ತಿದೆ
ಈ ಪರಿಯ "ಸಮಾಜ ಸೇವೆಯ" ಕಂಡು

ಶಾಶ್ವತ ನೀರಾವರಿ

ನೀಡಿದಾಗಲೆಲ್ಲ
ನೀರಿನ ಸಂರಕ್ಷಣೆಗಾಗಿ ಕರೆ
ಜನರಿಗನಿಸುವುದು ಕಿರಿಕಿರಿ
ಅದೇ ನೀರಿಲ್ಲದೇ ಬಸವಳಿದಾಗ
ಬೇಕೆನ್ನುವವರು
ನಮಗೆ ಬೇಕು
ಶಾಶ್ವತ ನೀರಾವರಿ

ನಮ್ಮವರು

ದಿನ ಬೆಳಗಾದರೆ
ಮಾತನಾಡಲು ಇರುವ ವಿಷಯ
ರಾಜಕೀಯ
ಇಲ್ಲ ಸಲ್ಲದ ಆರೋಪಗಳನ್ನು
ರಾಜಕಾರಿಣಿಗಳು
ಮಾಡುತಿರಲು
ಅದನ್ನೆ ರಂಜನೆಯಾಗಿ
ತೋರಿಸುವರು
ದೃಶ್ಯ ಮಾಧ್ಯಮದವರು
ನಮಗೋ ಒಂದೇ ಭಾವನೆ
ಅವರು ನಮ್ಮವರು

ಕಣ್ಣೀರು

ಹೆಣ್ಣಿಗೆ ಕೊನೆಯ ಆಸರೆ ತವರು
ಅಲ್ಲಿರುವವರು ಹೆತ್ತವರು
ಅದೂ ಇಲ್ಲದಿದ್ದಾಗ
ಇರುವ ಆಸರೆ
.
.
.
.
.
ಕಣ್ಣೀರು

ಸರ್ಕಾರದ ಸವಲತ್ತು

ಸರ್ಕಾರದ ಸವಲತ್ತು
ಪಡೆಯುವರು ಬಡವರು ಅತ್ತು
ಕಛೇರಿಗಳಲಿ ಬಾಗಿಸುವವರು ಕತ್ತು
ಏಕೆಂದರೆ ಇಲ್ಲ ಅವರಲ್ಲಿ
"ಹಣ" ದ ತಾಕತ್ತು

ವಸತಿ ಯೋಜನೆ

ವಸತಿ ಯೋಜನೆ
ಹಳ್ಳ ಹಿಡಿದು
ಬಸದಿಯ ಜನರು
ಆಡಿಕೊಳ್ಳುವಾಗ
ಎಡವಟ್ಟು ಮಾಡಿದ
ಪಂಚಾಯತಿ ಅಧಿಕಾರಿ
ಮುಖ ಮುಚ್ಚಿ ಹೋದ

ಅಂತರ

ಎಲ್ಲ ಯೋಜನೆಗಳಲ್ಲಿ
ಅವಾಂತರ
ಅನುದಾನ ಬರುವುದು
ಕೋಟ್ಯಂತರ
ಅಷ್ಟು ಖರ್ಚು ಮಾಡಿದ ನಂತರ
ಉಳಿದಿರುವ ಪ್ರಶ್ನೆ
ಇನ್ನು ಉಳಿದಿದಿಯೇ
ಬಡವ-ಶ್ರೀಮಂತರ ನಡುವೆ
ಇಷ್ಟು ಅಂತರ

"ಪ್ರಾಯಶ್ಚಿತ"

ಮತದಾರನಿಗೆ
ಮದ್ಯದ
ಮತ್ತೇರಿ
ಮೂರ್ಖನಂತೆ
ಮತಾಂಧನಿಗೆ
ಮತನೀಡಿ
ಅಭಿವೃದ್ಧಿಗಾಗಿ
ಮರುಗಿದರೆ
ಇರುವ
ಉತ್ತರ
"ಪ್ರಾಯಶ್ಚಿತ"ವೊಂದೇ

ಚಿಕ್ಕ ಹುಡುಗನ ಆಸೆ

ಚಿಕ್ಕ ಹುಡುಗನ ಆಸೆ
ಬಸ್ಸಿಗಿಂತ ರೈಲೇ ಬೇಕು
ಪದೇ ಪದೇ ಹಾಕುವುದಿಲ್ಲ
ಅದರಲ್ಲಿ ......ಬ್ರೇಕು

ಹೃದಯ

ಕಣ್ಣು ಹೊಡೆದಾಗ
ಹೃದಯ ಅರಳಿತು
ಕಲ್ಲೆತ್ತಿದ್ದಾಗ
ಹೃದಯ ಒಡೆಯಿತು

ಚಪ್ಪಾಳೆ

ಅವರೆಂದ ಪ್ರತಿ ಮಾತಿಗೆ
ಮೊದಲು ಹೊಡೆದದ್ದು ಚಪ್ಪಾಳೆ
ಕೆಳಗಿಳಿದ ಮೇಲೆ ಹೇಳಿದ್ದು
ಹಣ ಕೊಡದಿದ್ದರೆ
ನಾವು ಬರುವುದಿಲ್ಲ ನಾಳೆ

ಮಾರ್ಗದರ್ಶನ

ನಿಜವಾಗಿಯೂ ಬೇಕಾಗಿರುವುದು
ಹಿರಿಯರ ಮಾರ್ಗದರ್ಶನ
ಆದರೆ
ಅದೆಲ್ಲವನ್ನೂ ತಿಂದು ಹಾಕಿದೆ
ಇಂದು ದೂರದರ್ಶನ

Sunday, October 6, 2013

ಕರ್ತವ್ಯ

ಹುಚ್ಚು ಹುಚ್ಚಾಗಿ
ರಾಜಕೀಯವನ್ನು ಹೀಗಳೆಯುವ ನಾವು
ನಮ್ಮ ಕರ್ತವ್ಯ ಮರೆತಂತಿದೆ
ಮಾಹಿತಿ ಹಕ್ಕು
ಶಿಕ್ಷಣದ ಹಕ್ಕು
ಆ ಹಕ್ಕು, ಈ ಹಕ್ಕು
ಎಲ್ಲಾ ಇರುವಾಗ
ಲಂಚದ ಬಗ್ಗೆ ಮಂಚದ ಮೇಲೆ ಕುಳಿತು
ಭಾಷಣ ಬಿಡುತ್ತೇವೆ
ಕೊಂಚ ಕಷ್ಟ ಪಟ್ಟರೆ
ಇದೆ ಪರಿಹಾರ
ಇಲ್ಲದಿದ್ದರೆ ನಡೆಯುತ್ತಿರುತ್ತದೆ ನಮ್ಮ ಮೇಲೆ
ಎಲ್ಲ ಕಡೆಯಿಂದ ಪ್ರಹಾರ

ದುಃಖ - ಖುಷಿ

ಒಂದೆಡೆ ದುಃಖ
ಒಂದೆಡೆ ಖುಷಿ
ಇಷ್ಟು ದಿನ "ಬದಲಾವಣೆಯ ಹರಿಕಾರ"ರೆಂದು
ಕರೆಸಿಕೊಂಡವರು ಜೈಲು ಸೇರಿದ್ರು
ಇನ್ನೊಂದೆಡೆ ನ್ಯಾಯದಲ್ಲಿ
"ನಂಬಿಕೆ ಇಲ್ಲ" ಎಂಬುದು
ಸುಳ್ಳಾಯಿತು

ಸೈ(ಜು)ಕಲ್ಲು

ಶಾಲೆಗೆ ಹೋಗುವ ಮಕ್ಕಳಿಗೆ
ಕೊಟ್ಟಿರುವವರು ಸೈಕಲ್ಲು
ಆದರೇನು ಮಾಡುವುದು
ಪದೇ ಪದೇ ಪಂಚರ್ ಆಗತ್ತೆ
ರಸ್ತೆ(?)ಯಲ್ಲಿ ಇವೆ ತರಹ ತರಹ ಸೈ(ಜು)ಕಲ್ಲು

ವಿಚಿತ್ರ

ಆಸ್ಪತ್ರೆಗೆ ಹೋದಾಗ
ಡಾಕ್ಟರ್ ಸಿಗಲ್ಲ
ಕಛೇರಿಗೆ ಹೋದಾಗ
ಅಧಿಕಾರಿ ಸಿಗಲ್ಲ
ಆದ್ರೆ ಬಾರಿಗೆ ಹೋದ್ರೆ
.
.
.
.
.
.
ವೇಟರ್ ಸಿಕ್ಕೇ ಸಿಕ್ತಾನೆ

ಎಂಬುಲನ್ಸು

ಇದೆ ಎಂಬುಲನ್ಸು
ಕಾಲ್ ಮಾಡಿದಾಗ
ಬರುವ ಉತ್ತರ
ಡೀಸೆಲ್ ಖಾಲಿಯಾಗಿದೆ
ಕಿಟ್ ಬಾಕ್ಸ್ ಸರಿಯಾಗಿಲ್ಲ
ಸೈರನ್ ರಿಪೇರಿ ಮಾಡಬೇಕು
.
.
.
ಡ್ರೈವರ್ ರಜೆಯಲ್ಲಿದ್ದಾರೆ
ಮತ್ತೆ ಯಾಕೆ ಇದನ್ನು ಇಡಬೇಕು
ಉತ್ತರ
ನಾವು ನಮ್ಮ ಸಮಾಜ ಸೇವೆ
ತೋರಿಸ್ಬೇಕು

ನೆನಪು

ಕೊನೆ ತನಕ ಇರುವಂತಹ
ಉಡುಗೊರೆ
ನೀಡೆಂದು
ಕೇಳಿದ್ದಕ್ಕೆ
ಅವಳು ನೀಡಿದ
ಕಾಣಿಕೆ
.
.
.
.
.
ನೆನಪು

ವಾಸ್ತವ

ಅತ್ತೆ ಮಾವ ಸೇರಿ
ಸೊಸೆಗೆ ಬೆಂಕಿ ಹಚ್ಚಿದಾಗ
ಕೇಳಿದ್ದು ಚೀರಾಟ
ನಂತರ ಹಲವು "ಸಂಘಟನೆ"ಗಳ ಹೋರಾಟ
ಆ "ಸೊಸೆ"ಗೆ ಮಾಧ್ಯಮದವರ ಕಾಟ
ಕೊನೆಗೆ ಸಿಗದಿರುವ ಪ್ರಶ್ನೆ
ಯಾರು ಕಲಿಸುವವರು
ಪಾಪಿಗಳಿಗೆ "ಪಾಠ"?

ಆತ್ಮಹತ್ಯೆ

ಇಂದು ಹಲವರಿಗೆ
ಆತ್ಮಹತ್ಯೆ ಎಂಬುದು
ಸುಲಭ ಉಪಾಯ
ಆದರೆ
ಅದೊಂದು ಹತಾಶ ಮಾರ್ಗ
ಛಲ, ಬಲ, ವಿಶ್ವಾಸ ವಿರಲು
ಭಯಪಡಬೇಕಾದದ್ದು
ನಾವಲ್ಲ ಗೆಳೆಯ/ಗೆಳತಿ
"ಸಾವು"

ಪಿಂಚಣಿ

ಪಿಂಚಣಿ ಪಡೆಯಲು
ಆತ ತಿರುಗಿದ್ದು
ಮೂರು ಹೊತ್ತು
ಸಿಗಬೇಕಾದರೆ
ಆತನ ಹೊಸ ಪಾದರಕ್ಷೆ
ಸವೆದಿತ್ತು

ಬಾಲ್ಯ ವಿವಾಹ

ನಕ್ಕು ನಲಿದು ಆಡಬೇಕಾದ
ವಯಸಿನಲಿ
ಮದುವೆಯಾಗಿ
ಅತ್ತೆಯಿಂದ ಅನಿಸಿಕೊಂಡು
ಮನೆಯಲ್ಲಿರುವವರಿಗೆ "ಅತ್ತಿಗೆ"ಯಾಗಿ
ಕುತ್ತಿಗೆಯಲ್ಲಿ "ತಾಳಿ" ಇರಲು
ಅತ್ತು ಅತ್ತು ತವರು ಮನೆಗೆ ಬರುವ
ಹುಡುಗಿಯ ಗೋಳು
ಯಾರಿಗೂ ತಿಳಿಯದು
ಕಾರಣ
ಕಡಿಮೆಯಿರುವ ತಿಳುವಳಿಕೆ
ಇಲ್ಲ ಜವಾಬ್ದಾರಿ ಕಡಿಮೆ
ಮಾಡಿಕೊಳ್ಳುವ ಬಯಕೆ

ಭಾರತ

ಹಲವು ಸಮಸ್ಯೆಗಳ
ಸುಳಿಯಲ್ಲಿ
ಸಿಲುಕಿರುವ ಭಾರತಕೆ
ಬೇಕಾಗಿರುವುದು
ಸಾಲ, ಉದ್ಯೋಗವಲ್ಲ
ಬದಲಾಗಬೇಕಾಗಿರುವುದು
ತನ್ನ ಜವಾಬ್ದಾರಿ ಕುರಿತ
ಮನೋಭಾವ

ಜವಾಬ್ದಾರಿ


Saturday, October 5, 2013

ಕಾರಣ

ಫಲಿತಾಂಶದಲ್ಲಿ
ಹೆಣ್ಣು ಮಕ್ಕಳು ಮುಂದೆ
ಏಕೆಂದರೆ ಇರುವರು
ಗಂಡು ಮಕ್ಕಳು ಅವರ ಹಿಂದೆ

ಮುತ್ತು-ಮತ್ತು-ಕುತ್ತು

ಅಂದು ಅವಳಿಂದ ಕಾದೆ ಒಂದು ಮುತ್ತು
ಸುತ್ತುತ್ತಿದ್ದೆ ಅವಳ ಕಾಲೇಜ್ ಬಿಡುವ ಹೊತ್ತು
ಕೊನೆಗೂ ಸಿಗಲಿಲ್ಲ ಅವಳಿಂದ ಮುತ್ತು
ಬಂತು ನನ್ನ ಡಿಗ್ರೀ ಸಬ್ಜೆ ಕ್ಟ್ ಗೇ ಕುತ್ತು

ಮಾದರಿ

ಸಿಂಪಲ್ಲಾಗಿ ಲವ್ ಮಾಡಿ
ಕೂಲಾಗಿರತ್ತೆ ಆಗ ಬಾಡಿ
ಆಗಬಹುದು ನಿಮ್ಮದು ಸೂಪರ್ ಜೋಡಿ
ಕಲೀಬಹುದು ಜನ ನಿಮ್ಮನ್ನಾ ನೋಡಿ

ಲವ್

ಅವಳ ನೋಡಿ ಲವ್ವಲ್ಲಿ ಬಿದ್ದೆ
ಬರಾಂಗಿಲ್ಲ ಈ ಗ ಚೆನ್ನಾಗಿ ನಿದ್ದೆ
ಕನಸಲ್ಲಿ ಕೇಳತ್ತೆ ಅವಳ ಗೆಜ್ಜೆ ಸದ್ದು
ಇದೆಯಾ ಏನಾದ್ರೂ ಇದಕೆ ಮದ್ದು

ಚುನಾವಣೆ-ಮಣೆ

ಗೆದ್ದವರಿಗೆ ಈಗ ಮಣೆ
ಸೋತವರಿಗೆ ಇಲ್ಲ ಮನ್ನಣೆ
ಇನ್ನು ಐದು ವರ್ಷ ಇಲ್ಲ ಚುನಾವಣೆ
ಆದರೂ ತೀರದು ಇವರ ಅಧಿಕಾರದ ಬವಣೆ

ಬಿಜೆಪಿ-ಕೇಜೇಪಿ

ಮೂಲೆ ಸೇರಿತು ಬಿಜೆಪಿ
ಅಂಬೆಗಾಲಿಡುತ್ತದೆ ಕೇಜೇಪಿ
ಬಳ್ಳಾರಿಯಲ್ಲಿ ತಿರುಗಲಿಲ್ಲ ಫ್ಯಾನು
ಫ್ಲಾಪ್ ಆಯ್ತು ರೆಡ್ಡಿ ಪ್ಲಾನು

ಫೇಸ್

ಅಂತೂ ಇಂತು ಗೆದ್ದಿತು ಕಾಂಗ್ರೇಸ್
ಕಷ್ಟ ಎನಿಸಲಿಲ್ಲ ಸಿಎಮ್ ರೇಸ್
ಈಗ ಬಂದಿದೆ ಸಿದ್ಧರಾಮಯ್ಯ ಫೇಸ್
ಇನ್ಮುಂದೆ ಸಿಗಬಹುದೇ ನಮಗೆ ಕರೆಂಟ್ ತ್ರೀ ಫೇಸ್

ಪೀಡ್ಸು-ಏಡ್ಸು

ತುಂಬಾ ಡೇಂಜರ್ರು ಪೀಡ್ಸು
ಅದಕ್ಕಿಂತ ಡೇಂಜರ್ರು ಏಡ್ಸು
ಸರಿಯಿರದಿದ್ದರೆ ನಮ್ಮ ನಡತೆ
ಬೇಗ ಬರುವುದು ಸಾವು ನಮ್ಮ ಜೊತೆ

ರೇಟು

ಜಾಸ್ತಿ ಆಯ್ತು ಪೆಟ್ರೋಲ್ ರೇಟು
ಸಾಕಾಗದು ದಿನಕ್ಕೆ ನೂರರ ನೋಟು
ಹಾಕಿಕೊಂಡರೂ ಸೂಟು ಬೂಟು
ನಡೆದುಕೊಂಡು ಹೋಗುವುದೇ ಬೆಸ್ಟು

ಚಿಂತೆ-ಮೆಂತೆ

ನಮ್ಮೂರ ಶೆಟ್ಟರಿಗೆ ಒಬ್ಬಳೇ ಒಬ್ಬಳು ಮಗಳು
ಅವಳು ಎಲ್ಲೂ ಹೊರಗೆ ಬರಳು
ಶೆಟ್ಟರಿಗೆ ಅವಳದೇ ಚಿಂತೆ
ಅದಕ್ಕೆ ದಿನವೂ ತಿನ್ನುತ್ತಾರೆ ಮೆಂತೆ

ಕನಸು-ನನಸು-ಸೊಗಸು

ಬೀಳುವುದು ದಿನವೂ ಸುಂದರ ಕನಸು
ಆಗದು ಅದು ಸುಲಭವಾಗಿ ನನಸು
ಅದು ನನಸಾದರೆ ಆ ಜೀವನ
ಎಷ್ಟು ಸೊಗಸು

ಎಚ್ಚರಿಕೆ

ಸ್ಮೈಲು ಯಾಕೆ ಕೊಡ್ತಿಯಾ ನೀನು
ಲೈನ್ ಹೊಡೆಯೋ ಸ್ಕೆಚ್ಚು ಏನು
ಕಾಲೇಜಿನ ಸುಂದರ ಮೀನು ನಾನು
ಕನಸು ಕಾಣಬೇಡ
ಇರದು ನಿನ್ನ ಜೊತೆ ಲವ್ ಸೀನು

ಕವಿತೆ

ಇಂದು ನಾ ಬರೆದೆ ನನ್ನ ನೂರನೇ ಕವಿತೆ
ಇವೆಲ್ಲ ಬಂದವು ನನ್ನ ಭಾವೆನಗಳ ಜೊತೆ
ಕೆಲವೆಡ ಇವೆ ನನ್ನ ನೋವಿನ ಕಥೆ
ಆದರೆ ಪಡೆನು ಅದಕ್ಕಾಗಿ ಎಂದು ನಾ ವ್ಯಥೆ

ಆಮಂತ್ರಣ

ನಿಜ ಹೇಳು ಓ ಚೆಲುವೆ
ಇದೆಯೇ ನನ್ನ ಮೇಲೆ ಒಲುಮೆ
ನಿನಗಾದರೆ ನಾನು ಲೈಕು
ಈಗಲೇ ಹತ್ತಿಬಿಡು ನನ್ನ ಬೈಕು