ಗಂಡ ಬಂದಾಗ
ಹೆಂಡತಿಯ ಮುಖ
ಅರಳಲು ಕಾರಣ
ಅವನು ತಂದಿರುವ ಹೊಸ ಬಟ್ಟೆ
ಅದೇ ಮುನಿಯಲು ಕಾರಣ
ಆತ ಹಾಕಿರುವ ಕೊಟ್ಟೆ
(ಈಗ ಬಾಟಲ್ ಬಂದಿದೆ)
ನಾನು ಶ್ರೀಕಾಂತ ಬಿ ಭಟ್. ನನ್ನ ಸ್ವಂತ ಊರು ಶಿರಸಿ ಉತ್ತರಕನ್ನಡ ಜಿಲ್ಲೆಯಲ್ಲಿದೆ. ನಾನು ಗುಜರಾತ್ ಮೂಲದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿರುವ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ(FES) ಎಂಬ ಸಂಸ್ಥೆಯಲ್ಲಿ ಹಿರಿಯ ಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಎಪ್ರಿಲ್ 2013ರಂದು ಸಂಸ್ಥೆಯ ಕಾರ್ಯ ನಿಮಿತ್ತ ಗುಜರಾತ್ ಹೋಗಿದ್ದೆ. ಅಲ್ಲಿ ಸಂಜೆ 6 ಗಂಟೆಯ ನಂತರ ಫೇಸ್-ಬುಕ್ ನೋಡುತ್ತ 3K - ಕನ್ನಡ ಕವಿತೆ ಕವನ ನೋಡಿದೆ. ಅದರಲ್ಲಿ ಕೆಲವು ಸಾಲುಗಳನ್ನು ಬರೆದಾಗ ಹಲವರು ಕಮೆಂಟ್ ಮತ್ತು ಲೈಕ್ ಮಾಡಿದರು. ಅಲ್ಲಿಂದಲೇ ಈ ಪಯಣ ಶುರುವಾಯಿತು.