ನಾನು ಶ್ರೀಕಾಂತ ಬಿ ಭಟ್. ನನ್ನ ಸ್ವಂತ ಊರು ಶಿರಸಿ ಉತ್ತರಕನ್ನಡ ಜಿಲ್ಲೆಯಲ್ಲಿದೆ. ನಾನು ಗುಜರಾತ್ ಮೂಲದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿರುವ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ(FES) ಎಂಬ ಸಂಸ್ಥೆಯಲ್ಲಿ ಹಿರಿಯ ಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಎಪ್ರಿಲ್ 2013ರಂದು ಸಂಸ್ಥೆಯ ಕಾರ್ಯ ನಿಮಿತ್ತ ಗುಜರಾತ್ ಹೋಗಿದ್ದೆ. ಅಲ್ಲಿ ಸಂಜೆ 6 ಗಂಟೆಯ ನಂತರ ಫೇಸ್-ಬುಕ್ ನೋಡುತ್ತ 3K - ಕನ್ನಡ ಕವಿತೆ ಕವನ ನೋಡಿದೆ. ಅದರಲ್ಲಿ ಕೆಲವು ಸಾಲುಗಳನ್ನು ಬರೆದಾಗ ಹಲವರು ಕಮೆಂಟ್ ಮತ್ತು ಲೈಕ್ ಮಾಡಿದರು. ಅಲ್ಲಿಂದಲೇ ಈ ಪಯಣ ಶುರುವಾಯಿತು.
Thursday, March 13, 2014
Saturday, March 8, 2014
ಇನಿಯನ ನೆನಪು
ಇಬ್ಬನಿಯ
ಹನಿಯಲ್ಲಿ
ಇನಿಯನ
ನೆನಪು
ಕಬ್ಬಿನ
ಸಿಹಿಯಲ್ಲಿ
ಕಾಡುವ
ನೆನಪು
ಮಲ್ಲಿಗೆಯ
ಕಂಪಲ್ಲಿ
ಸುವಾಸನೆಯ
ನೆನಪು
ನೀ ಹೋದ
ದಾರಿಯಲ್ಲಿ
ಕಾಲ್ಗೆಜ್ಜೆ
ನೆನಪು
ಇಬ್ಬಗೆಯ ಪ್ರೀತಿ
ಇನಿಯನ
ಇಬ್ಬಗೆಯ ಪ್ರೀತಿ
ಪ್ರಿಯತಮೆಗೆ
ಚಿಂತೆಗೀಡು ಮಾಡಿದೆ
ಮಾಡಿದ ಅಡುಗೆ
ತಿನ್ನುವ ಮೊದಲೇ
ಇನಿಯ
ಮಲಗಾಗಿದೆ
ವಿಧಿಬರಹ
ಮುದಿ
ಹರಿಣವ
ನೋಡಿ
ಖುಷಿಪಡುತ್ತಿದೆ
ಹುಲಿ!
ಭೂರಿ
ಭೋಜನವೆಂದು!
ಪಾಪ
ತಿಳಿಯದದಕೆ
ಬೇಟೆಗಾರನ
ಗುಂಡು
ಎದೆಯನು
ಸೀಳಿ
ಆಕ್ರಂದನವ
ಕೇಳಿಸಿತು!
ಕಾಲ್ಗುಣ!!!!!!!!
ಕಾಲ್ಗುಣ
ಸರಿಯಿಲ್ಲವೆಂದು
ಹಂಗಿಸಿ
ಅವಳ
ನಿಂದಿಸಿದರು!
ಜನ
ಅಂತರಾಳದ
ಮನವನು
ಅರಿಯದೇ!
ಹೆಣ್ಣಿನ
ಕಣ್ಣೀರು!
ಮಣ್ಣಿನಲಿ
ಸೇರಿ
ಭೂಮಾತೆ
ಆಗಿರುವಳು
ಹಸಿ!
ಹಸಿದ
ಹೊಟ್ಟೆಯಲಿ
ಕುಸಿದು
ಕುಳಿತಿಹಳು!
ತಾಗುತಿದೆ
ಕೈಮೈಗೆ
ಬಿಸಿ!
ಮನದಲಿ
ಕಸಿವಿಸಿ!
ಪರಿಧಿ
ಕೆಲಸದ
ಒತ್ತಡದಲಿ
ಕನಸು
ಕಾಣಲು
ಹೆದರಿಕೆ!
ಕನಸು ಕನಸಾಗಿರುವುದೋ?
ನನಸಾಗುವುದೋ?
ಗೊಂದಲದ ಗೂಡಾಗಿದೆ ಮನಸು!
ಬೆಟ್ಟದಷ್ಟಿದೆ ಕನಸುಗಳ ರಾಶಿ
ಮುನ್ನುಗ್ಗುತ್ತಿದೆ ವಾಸ್ತವದ ಪರಿಧಿಯನು ದಾಟಿ!
ಅಕಾಲ..........
ನಿದಿರೆ ಬರದೆಂದು
ಮದಿರೆಯ ಪ್ರೀತಿಸಿದ
ಪ್ರಾಯದಲಿ ಮುಪ್ಪು
ದಿನಗಳಣೆಸುತ
ಕಳೆಯುತಿರುವ
ಬದುಕನ್ನು
ಜವರಾಯನ ಭಯದಲ್ಲಿ
ಪ್ರೇಮ ಸ್ಪರ್ಶ
ನೀನಿರದೇ
ಬಾಳಿಗಿಲ್ಲ ಅರ್ಥ
ಬಾಳೆನಿಸುವುದು ವ್ಯರ್ಥ
ನೀಡು ನೀ ಎನ್ನ ಬಾಳಿಗೆ
ಪ್ರೇಮ ಸ್ಪರ್ಶ
ಕಳೆದು ಬಿಡುವೆ ನಗುನಗುತ
ನೂರು ವರ್ಷ
ವಾಸ್ತವ
ಹಸಿವು ಸಂಕಟದಲಿ
ಮರುಗಿ ಮುದುಡಿ
ಕುಳಿತಿರುವ ಜನ!
ಜರಿಯುತಿರುವರು
ದೇವರನು ಅನುದಿನ!
೧ ರೂ ಅಕ್ಕಿ
ಕೊಟ್ಟವ ದೇವರಾದ
ದುಡಿಯಲು ಶಕ್ತಿ ಕೊಟ್ಟವ
ಬೇಡವಾದ
ಮತ್ತೆಮತ್ತೆ ಅದೇ ಕನಸು
ಇನ್ನು ಏನೋ ಕೊಡುವರೆಂದು
ತೋಳ್ಬಲದ ಶಕ್ತಿಯನು ಮರೆಯುತ!
ಪರಿಮಿತಿ
ಮಾನಿನಿಯ
ಕಣ್ಣಲ್ಲಿ
ಮೈದಳೆದ ಪ್ರೀತಿ!
ಮೋಹಿನಿಯು
ಕಣ್ಣಲ್ಲಿ
ಕುಕ್ಕುವ ರೀತಿ!
ಮೇನಕೆಯು
ಬಿಂಕವ
ತೋರುವ ರೀತಿ!
ಅಪ್ಸರೆಯ ನಡುವು
ಬಳಕುವ
ರೀತಿ!
ನಿನ್ನ ಬಗ್ಗೆ
ಹೇಳಲು
ಶಬ್ದಗಳಿಗಿಲ್ಲ ಮಿತಿ
ನಮ್ಮಿಬ್ಬರ ಪ್ರೀತಿಗೆ
ಹಾಕುವ ದಂಪತಿ
ಎಂಬ ಪರಿಮಿತಿ
ತಾಳಿ
ಹರೆಯದ ಪ್ರೀತಿ
ಮರೆಯುವ ಮೊದಲು
ಬಿದ್ದಿದೆ ಕತ್ತಿಗೆ ತಾಳಿ!
ಪ್ರೀತಿ ಯಾರದೋ
ತಾಳಿ ಯಾರದೋ?
ಯಾವ ದುಂಬಿಗೆ
ಯಾವ ಹೂವು!
ಒಳಗೆ ನೋವು
ಹೊರಗೆ ಕೃತಕ ನಗುವು
ಅತ್ತೆ, ಮಾವ, ಗಂಡ, ನಾದಿನಿ..........
ಎಲ್ಲರೂ ಇರುವರು ನಗುತ
ಹೊಸಮನೆಗೆ ಬಂದ ಸೊಸೆ
ಕುಳಿತಿರುವಳು ತನ್ನ
ಇನಿಯನ ನೆನೆಯುತ
ಜೀವನ ಬೃಂದಾವನ
ಬದುಕೆಂಬ ಮರದಲ್ಲಿ
ಜಗಳವೆಂಬುದು ಒಂದು ಹಣ್ಣು
ಅದಕ್ಕೆ ಕಾರಣವಾಗಬಹುದು ಗಂಡು/ಹೆಣ್ಣು
ಹೊಂದಿಕೊಂಡರೆ ಜೀವನ ಬೃಂದಾವನ
ಇಲ್ಲದಿದ್ದರೆ ಬರೀ ಸ್ಮಶಾನ
ಅಣಕ
ಬಾವಿಯಲಿನ ನೀರು
ಆವಿಯಾಗಿ
ಖಾಲಿಯಾಗುತಿದೆ!
ಪಕ್ಕದ ಕೊಳವೆ ಬಾವಿ
ಈ ಬಾವಿಯ ನೀರನ್ನು
ಜರ್ರನೆ ಎಳೆಯುತಿದೆ!
ಕೊಳವೆ ಬಾವಿಯ ಸಾಲ
ಬೆಳೆದ ಬಡ್ಡಿಯ ಬಾಲ
ಕೃಷಿಕನ ಕೊಲ್ಲುತಿದೆ!
ಬರಿದಾದ ಬಾವಿ
ಬರಡಾದ ಭೂಮಿ
ಕೃಷಿಕನ ಅಣಕಿಸುತಿದೆ!
ನಮ್ಮ ಕಷ್ಟ
ಕುಂಟೆ ಕಾಲುವೆ
ಬರಿದು
ನೀರು ಅದರಲಿ ಬರದು!
ಕೆರೆಗೆ ಕೋಡಿಯಿಲ್ಲ
ಅದಕೆ ನೀರಿಲ್ಲ!
ಬಂದ ನೀರು
ನಿಲ್ಲದೇ ಹೋಗುತಿಹುದು
ಹರಿದು!
ಕಾಲುವೆಯಲಿ ಹೂಳು
ನೀರಿಲ್ಲದೇ ಗೋಳು!
ಕಾಡಿನಲ್ಲಿ
ಮರವಿಲ್ಲ
ಕುರಿ ಮೇಕೆಗೆ ಮೇವಿಲ್ಲ
ನಿತ್ಯವೂ ಅಲೆದಾಟ
ಎಲ್ಲ ವಿಧಿಯಾಟ
ಕೇಜ್ರಿ - ಕ್ರೇಜಿ
ಕೇಜ್ರಿ
ಸರ್ಕಾರ
ಕ್ರೇಜಿಯಾಯ್ತು!
ಎಂಪಿ ಎಲೆಕ್ಷನ್ ಗೆ
ಬಿಜಿಯಾಯ್ತು!
ಅದನ್ನು
ನೋಡಿದವರಿಗೆ ಅನಿಸಿತು
ಯಾಕೋ ಇದು ಅತಿಯಾಯ್ತು!
Subscribe to:
Posts (Atom)





