ಕಡಲಿನ ಆಳಕೆ ಸಾಗಿ
ಮುತ್ತೊಂದ ತಂದಂತೆ
ಎದೆಯಾಳದಿಂದ ನೆನಪುಗಳ ಕಲಕಿ
ಪುನಃ ಪುನಃ ಮನವನಾವರಿಸುವ ಆ ನಿನ್ನ ಪರಿ
ನಾ ಅರಿಯೆ
ಗುನುಗುನುಗುತಿರುವ ಪಿಸುಮಾತು
ಹೊರಸೂಸುವ ಮುಗುಳ್ನಗೆ
ಕಣ್ಣಲ್ಲೇ ಕಾಡುವ ಕಣ್ಣೋಟ
ನಾ ಮರೆಯಲಾರೆ
ಭಾವನಗೆಳ ಸಾಲಿನಲಿ ಸಾಗಿ
ಭಾವಲಹರಿಯಲಿ ಮಿಂದು
ಭಾವನಾತ್ಮಕ ಲೋಕಕೆ
ಸಾಗಿ ಬಂದ ನಮ್ಮ ಪಯಣ
ನಾ ಮರೆಯಲಾರೆ
ಕ್ಷಣ ಕ್ಷಣದ ಮಾತು
ಪ್ರತಿನಿಮಿಷದ ಸಲಹೆ
ಮುಂದುವರೆಯಲಿ ಹೀಗೆ
ಮುಂದೆ ಸಾಗಲಿ ಹೀಗೆ
ದಡ ಸಿಗುವವರೆಗೆ ಸಾಗಲಿ ಈ ನಮ್ಮ ಪಯಣ
ಮುಗಿಯದಿರಲಿ ಈ ನಮ್ಮ ಚಾರಣ
No comments:
Post a Comment