Followers

About Me/ನನ್ನ ಬಗ್ಗೆ

Friday, August 16, 2013

ಸ್ವಾತಂತ್ರ್ಯೋತ್ಸವ

ಕೊಟ್ಟ ಸ್ವಾತಂತ್ರ್ಯವನು
"ತಂತ್ರ" "ಪ್ರತಿತಂತ್ರ"ಗಳಲಿ
ಅನುಭವಿಸುತ
ಸಿಹಿ ಹಂಚಿ ತಿನ್ನುತಿಹೆವು
ಅದಕೆ
ಸ್ವಾತಂತ್ರ್ಯದ ದಿನ
ಎಂದರೆ ರಜ
ಹಲವರಿಗೆ ಕೇವಲ ಮಜ

ತಿಂದ ಗುಂಡುಗಳೆಷ್ಟೋ
ಸುರಿದ ರಕ್ತವೆಷ್ಟೋ
ಕಷ್ಟಪಟ್ಟು ಕೊಟ್ಟ ಸ್ವಾತಂತ್ರ್ಯವನು
ಇಷ್ಟಬಂದಂತೆ ಅನುಭವಿಸುತಿಹೆವು

ಹೋದ ಹೋದಲ್ಲಿ
ಆಗುತಿದೆ ಅಭಿವೃದ್ಧಿಯ ಘೋಷಣೆ
ಕಾಲಚಕ್ರದಲ್ಲಿ ಉಳಿದಿದೆ ಕೇವಲ ಆಶ್ವಾಸನೆ

ಇದೆಲ್ಲದರ ನಡುವೆ ಇದೆ ಸಾಧಿಸುವ ಛಲ
ಆ ನಿರ್ಧಾರ ಅಚಲ
ಸಿಗಲಿ ಎಲ್ಲರ ಬೆಂಬಲ
ಆಗುವೆವು ನಾವಾಗ ಸಫಲ

ಇದೇ ನನ್ನ ಆಶಯ
ತಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯ

No comments:

Post a Comment