ನನ್ನ ಬಾಳಿನ
ನಂದಾದೀಪ ನೀನು
ಏಕೆ ನೊಂದುಕೊಂಡೆ
ಅರಿಯದೆ ಮಾಡಿದ ತಪ್ಪಿಗೆ
ನೀನಿಡಿದೆ ಅಗಲುವಿಕೆಯ ಶಿಕ್ಷೆ
ಬದಲಾಗಿದೆ ನನ್ನ ಜೀವನದ ನಕ್ಷೆ
ಏಕಾಂಗಿಯಾಗಿ ನಿನ್ನ ನೆನೆಯುತಿರುವೆ
ಓ ಅರ್ಧಾಂಗಿ
ತಿರುಗಿ ಬಾ ಆ ತಪ್ಪನ್ನು ನುಂಗಿ
ನಗಲು ಇವೆ ಹಲವು ಕಾರಣ
ವಿರಹ ವೇದನೆಯಲಿ
ವಿಲವಿಲ ಒದ್ದಾಡುತಿರುವೆ
ಮನ್ನಿಸು ಮನದೆನ್ನೆ
ಕೊಡುವೆ ನನ್ನ ಕೆನ್ನೆ
ಮುದ್ದೋ ಗುದ್ದೋ
ನೀ ನಿರ್ಧರಿಸು
No comments:
Post a Comment