ಫೇಸ್ ಬುಕ್ ನಲ್ಲಿ ಫೇಸ್ ಇರಲಿಲ್ಲ
ಪ್ರೊಪೋಸ್ ಮಾಡಬೇಕಾದ್ರೆ ಫೋಟೋ ಇರಲಿಲ್ಲ
ಎದುರಿಗೆ ಬಂದಾಗ ಇಬ್ಬರಿಗೂ ಶಾಕು
ಮೈಂಡ್ ಫುಲ್ ಬ್ಲ್ಯಾಂಕು
ಏಕೆಂದರೆ
ಅವನ ಹೈಟು ಕಮ್ಮಿ
ಅವಳು ಸ್ವಲ್ಪ ಡುಮ್ಮಿ
ಇಬ್ಬರು ಅಪ್ಲೋಡ್ ಮಾಡಿದ ಫೋಟೋ "ಡಮ್ಮಿ"
ನಾನು ಶ್ರೀಕಾಂತ ಬಿ ಭಟ್. ನನ್ನ ಸ್ವಂತ ಊರು ಶಿರಸಿ ಉತ್ತರಕನ್ನಡ ಜಿಲ್ಲೆಯಲ್ಲಿದೆ. ನಾನು ಗುಜರಾತ್ ಮೂಲದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿರುವ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ(FES) ಎಂಬ ಸಂಸ್ಥೆಯಲ್ಲಿ ಹಿರಿಯ ಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಎಪ್ರಿಲ್ 2013ರಂದು ಸಂಸ್ಥೆಯ ಕಾರ್ಯ ನಿಮಿತ್ತ ಗುಜರಾತ್ ಹೋಗಿದ್ದೆ. ಅಲ್ಲಿ ಸಂಜೆ 6 ಗಂಟೆಯ ನಂತರ ಫೇಸ್-ಬುಕ್ ನೋಡುತ್ತ 3K - ಕನ್ನಡ ಕವಿತೆ ಕವನ ನೋಡಿದೆ. ಅದರಲ್ಲಿ ಕೆಲವು ಸಾಲುಗಳನ್ನು ಬರೆದಾಗ ಹಲವರು ಕಮೆಂಟ್ ಮತ್ತು ಲೈಕ್ ಮಾಡಿದರು. ಅಲ್ಲಿಂದಲೇ ಈ ಪಯಣ ಶುರುವಾಯಿತು.
No comments:
Post a Comment