ನೀನು ಬಳಿ ಬಂದು
ಪ್ರೀತಿಯಲಿ ಮಿಂದು
ಬಾಳನು ಸಾಗಿಸುವಾಸೆ ನನಗೀಗ
ಬಾ ನನ್ನೊಡತಿ ನೀ ಬೇಗ
ಅಕ್ಕರೆಯ ನೋಟದಲಿ
ಬೆಚ್ಚನೆಯ ಅಪ್ಪುಗೆಯಲಿ
ಚುಂಬಿಸುವಾಸೆ ನನಗೀಗ
ಬಾ ನನ್ನೊಡತಿ ನೀ ಬೇಗ
ಎದೆಯಲ್ಲಡಗಿರುವ ಪ್ರೀತಿ
ನಿನ್ನ ಕಂಡಾಗ ಉಂಟಾಗುವ ರೀತಿ
ನೀ ದೂರ ಹೋಗುವ ಭೀತಿ ನನಗೀಗ
ಬಾ ನನ್ನೊಡತಿ ನೀ ಬೇಗ
ಬಾಳೆಂಬ ಬಂಧನ
ನಮ್ಮ ಈ ಸ್ಪಂದನ
ಹೀಗೆ ಮುಂದೆ ಸಾಗಿಸುವಾಸೆ ನನಗೀಗ
ಬಾ ನನ್ನೊಡತಿ ನೀ ಬೇಗ
No comments:
Post a Comment