Followers

About Me/ನನ್ನ ಬಗ್ಗೆ

Sunday, September 15, 2013

ವೇದನೆ

ಚುಚ್ಚಿ ಚುಚ್ಚಿ ಮಾತನಾಡಿ
ನಿತ್ಯ ಕೊಲ್ಲುವರು ನನ್ನ

ಗಂಡನ ಸಿಟ್ಟು
ಮಾವನ ತಾತ್ಸಾರ
ಅತ್ತೆಯ ಕಾಟ
ಸೇರುತ್ತಿಲ್ಲ ಊಟ

ಮಾತು ಮಾತಿಗೆ
ತವರು ಮನೆಗೆ ಬೈಗುಳ
ದಿನಬೆಳಗಾದರೆ ಮನೆಯಲ್ಲಿ ಜಗಳ

ಅಪ್ಪನ ಪ್ರೀತಿ
ಅಮ್ಮನ ಮಮತೆ
ಈಗ ಮುಗಿದು ಹೋದ ಕಥೆ

ಎಲ್ಲರ ಮುಂದೆ ಹೇಳಿಕೊಂಡೆ
ಅವರ ಬಾಯಲ್ಲಿ ಬರಿ ವೇದಾಂತ
ಅದೇ..................
ಕೊಟ್ಟ ಹೆಣ್ಣು ಕುಲಕ್ಕೆ ಹೊರೆ
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ

ಕೇಳಲು ಸುಲಭ
ಸಹಿಸಲು ...........................

ಆದರೂ ನುಂಗಲಾಗದೊಂದು ಮಾತು
"ಹೆಣ್ಣು ಸಂಸಾರದ ಕಣ್ಣು"

No comments:

Post a Comment