ಆ ಭಾಗ್ಯ ಈ ಭಾಗ್ಯ
ನೋಡಿ ಸಾಕಾದ
ಹಣ್ಣು ಮುದುಕಿ ಹೇಳಿದ್ದು!!!!!
ಯಪ್ಪಾ ಎಲ್ಲಾ ಬರ್ತೈತೆ
ನನಗೇನೈತೆ ಮಣ್ಣು?
ವಿಧವಾ ವೇತನ ಇಲ್ಲಾ
ಓಲ್ಡ್ ಏಜ್ ಪೆನ್ಶನ್ ಇಲ್ಲಾ
ರೇಶನ್ ಅಂತೂ ಸಿಗಾಂಗಿಲ್ಲ
ಮನೆಯಾಗ್ ಒಂದೂ ಲೈಟ್ ಉರಿಯಾಂಗಿಲ್ಲ!
ನನ್ ಬಾಳ್ ಕೊನೆ ದಿನಾ ಎಣಿಸ್ತಾ ಇರೋ ನನಗೆ
ಇಲ್ಲ ಈ ರೀತಿ ಭಾಗ್ಯ
ಬರೀ ತುಂಬಿದೆ ದೌರ್ಭಾಗ್ಯ
No comments:
Post a Comment