ಕನಸಿನ ಸಂಜೆಯಲಿ
ನಿನ್ನ ಆ ನೆನಪಿನಲಿ
ಆಗಸವ ಕಂಡೆ ನಾನು
ತಾರೆಯಾಗಿ ಕಂಡೆ ನೀನು
ಚುಕ್ಕಿಗಳ ನಡುವೆ
ಒಲವಿನ ಹಕ್ಕಿಯಾಗಿ
ಹಾರುವಂತೆ ಕಂಡೆ ನೀನು
ತಂಪನೆಯ ಇರುಳಲ್ಲಿ
ಚಂದಿರನ ಬೆಳಕಿನಲ್ಲಿ
ಚಂದ್ರ ಚಕೋರಿ ನೀನು
ಹೊತ್ತೇರುವ ಮುನ್ನ
ಮತ್ತೆರುವ ಹೊತ್ತಲ್ಲಿ
ಮಾಯವಾಗಿ ಹೋದೆ ನೀನು
No comments:
Post a Comment