ಬಾಪು
ಎಲ್ಲರ ಮಾತುಗಳಲ್ಲಿದೆ ನಿನ್ನ ಆಶಯಗಳ ಛಾಪು
ಹೊಡೆಯುವರು ಜನರದಕೆ ಕ್ಲ್ಯಾಪು
ಆದರೆ ಕಾರ್ಯಗತಗೊಳಿಸುವಲ್ಲಿ ಇದೆ ಗ್ಯಾಪು
ಅದಕೆ ಎಲ್ಲ ಯೋಜನೆಗಳು ಆಗುತಿವೆ ಫ್ಲಾಫು
ಬಾಪು
ನಿನ್ನ ಕನಸು ರಾಮರಾಜ್ಯ
ಇಲ್ಲಿ ತುಂಬಿದೆ ವ್ಯಾಜ್ಯ
ಖಾಲಿಯಾಗದು ಬ್ರಷ್ಟಾಚಾರದ ತ್ಯಾಜ್ಯ
ಮುಂದೆ ಆಗದಿರಲಿ ರಾವಣನ ಸಾಮ್ರಾಜ್ಯ
ಬಾಪು
ನಿನ್ನ ಕನಸು ಸುಂದರ
ಭಾರತಾಂಬೆಯ ಪುಣ್ಯ ಮಂದಿರ
ತೊಲಗಲಿ ಎಲ್ಲ ಹಂದರ
ಬಾಳಲಿರಲಿ ನಗುವ ಚಂದಿರ
No comments:
Post a Comment