Followers

About Me/ನನ್ನ ಬಗ್ಗೆ

Friday, October 4, 2013

ಮನಮೆಚ್ಚಿದ ಹುಡುಗ *****************


ಮನಮೆಚ್ಚಿದ ಹುಡುಗ
ಕನಸು ಕಟ್ಟಿದ ಹುಡುಗ
ಹೇಗೆ ಅರಿಯಲಿ ನಾ
ಅವನ ಮನಸನಾ !!ಮನ ಮೆಚ್ಚಿದ ಹುಡುಗ!!

ಕದ್ದು ಕದ್ದು ನನ್ನ ನೋಡಿ
ಮಂದಹಾಸ ಒಮ್ಮೆ ಬೀರಿ
ಕನಸಿನಲ್ಲಿ ಬಂದ ಅವನಾ
ಹೇಗೆ ತಿಳಿಯೆ ನಾ !!ಮನ ಮೆಚ್ಚಿದ ಹುಡುಗ!!

ಕಣ್ಣಿನಲ್ಲಿ ಕಾಂತಿ ತಂದು
ಮನದಲ್ಲಿ ಶಾಂತಿ ತಂದು
ಹೇಗೆ ಹೊಗಳಲಿ ಅವನಾ
ಅಂದ ಚಂದನಾ !!ಮನ ಮೆಚ್ಚಿದ ಹುಡುಗ!!

ನೂರು ಆಸೆ ನೂರು ಕನಸು
ಮಾತು ಕೇಳದ ವಯಸು
ಅವನಡೆಗೆ ಓಡುವ ಮನವಾ
ಹೇಗೆ ತಡೆಯೆ ನಾ !!ಮನಮೆಚ್ಚಿದ ಹುಡುಗ!!

No comments:

Post a Comment