ಎತ್ತಾಗ ಹೋಗಕ್ಕತ್ತೈತಿ ನಮ್ಮ ಸಮಾಜ
ದೀಕ್ಷೆ ಕೊಡ್ತಾರಂತಾ ಈ ಜನಾ ನಮಗಾ
ಗೊತ್ತಲ್ಲೇನ್ ಇವ್ರಿಗೆ
ಹೊಟ್ಟೆಗೆ ಊಟಾ ಇಲ್ದೇ ಸಾಯಾಕ್ ಹತ್ತಾರ್ ಜನಾ
ಇರ್ಲಿಕ್ಕ್ ಸೂರಿಲ್ಲಾ
ದೀಕ್ಷೆ ತಗಾಂಡೇನ್ ಮಾಡೋದ್ರಿ
ಅಲ್ಲಾ ಅದೇನ್ ಕಾಲೇಜ್ ಸರ್ಟಿಫಿಕೇಟಾ?
ಅದ್ ಕೊಟ್ರೆ ಏನ್ ಉದ್ಯೋಗ್ ಸಿಗ್ತೈತೇನ್ರಿ?
ನಿಜವಾಗ್ಲೂ ಭಾಳ್ ಬ್ಯಾಸ್ರ್ ಆಗ್ತೈತ್ರಿ
ನಮಗ್ ಇದೆಲ್ಲಾ ಬ್ಯಾಡ್ರಿ
ದಿನಾ ದ್ಯಾವ್ರಿಗೆ ಕೈ ಮುಗೀತೇವೆ
ಒಳ್ಳೆದಾಗ್ಲಿ ಅಂತಾ ಬೇಡ್ಕೊಳ್ತೇವೆ ಅಷ್ಟೇ!!!!!!!!!!!
No comments:
Post a Comment